Select Your Language

Notifications

webdunia
webdunia
webdunia
Friday, 11 April 2025
webdunia

ಎರಡು ದಿನದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿದ ನಟಿ ವಿಜಯಲಕ್ಷ್ಮಿ

Actress Vijayalakshmi

geetha

bangalore , ಬುಧವಾರ, 6 ಮಾರ್ಚ್ 2024 (19:04 IST)
ಬೆಂಗಳೂರು-2 ದಿನದೊಳಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ  ನಟಿ ವಿಜಯಲಕ್ಷ್ಮಿ ವಿಡಿಯೋ ಮೂಲಕ ಹೇಳಿದ್ದಾರೆ. ಅಲ್ಲದೇ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ.ಸೂರ್ಯವಂಶ, ನಾಗಮಂಡಲ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸಿನಿರಸಿಕರ ಮನ ಗೆದ್ದ ನಟಿ ವಿಜಯಲಕ್ಷ್ಮಿ ಪರಭಾಷೆಯ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ನಾಮ್ ತಮಿಳರ್ ಪಾರ್ಟಿಯ ಸೀಮಾನ್ ನನಗೆ ಮೋಸ ಮಾಡಿದ್ದಾನೆ ಎಂದು ಆರೋಪ ಮಾಡಿದ್ದಾರೆ.
 
ಫೆ.29ರಂದು ನಾನು ವಿಡಿಯೋ ಹಾಕಿ ಒಂದು ಬೇಡಿಕೆ ಇಟ್ಟಿದ್ದೆ. ನಾಮ್ ತಮಿಳರ್ ಪಕ್ಷದ ಸೀಮಾನ್ ನನೊಟ್ಟಿಗೆ ಮಾತನಾಡಬೇಕು ಎಂದು ಕೇಳಿದ್ದೆ. ಈಗ ಮಾರ್ಚ್ 5. ಒಂದು ಹೆಣ್ಣು ಎಷ್ಟು ನೋವಾಗಿದ್ದರೆ ಕಟ್ಟಡದ ತೆರೆಸ್ ಮೇಲೆ ಹೋಗಿ ಆ ರೀತಿ ವಿಡಿಯೋ ಮಾಡಿ ಹಾಕಿರುತ್ತಾಳೆ ಅಲ್ವಾ? ಅಂತಹ ವೀಡಿಯೋ ಹಾಕಿದ ಮೇಲೂ ಅವಳು ಸಾಯಲಿ ಎಂದು ಆತ ಸುಮ್ಮನಿರುತ್ತಾನೆ ಅಂದ್ರೆ ಏನು ಮಾಡುವುದು.
 
ನನ್ನ ಸಹೋದರಿಗೆ ಉಂಟಾಗಿದ್ದ ಸಮಸ್ಯೆಯಿಂದಾಗಿ ನಾನು ಮೊದಲ ಬಾರಿಗೆ ಸೀಮಾನ್​ ಅವರನ್ನು ಭೇಟಿ ಮಾಡಿದೆ. ಆಗ ಸೀಮಾನ್​ ಗೆ ಮದುವೆ ಆಗಿರಲಿಲ್ಲ. ನನ್ನನ್ನು ಮದುವೆ ಆಗುವುದಾಗಿ ಹೇಳಿದ್ದ, ನನ್ನ ಜೊತೆ ಆತ ಮೂರು ವರ್ಷ ಇದ್ದ. ಅಷ್ಟೇ ಅಲ್ಲದೆ ನನ್ನನ್ನು ಗುಟ್ಟಾಗಿ ಮದುವೆ ಕೂಡ ಆಗಿದ್ದಾನೆ. ನನ್ನ ಬದುಕನ್ನೇ ಹಾಳು ಮಾಡಿಬಿಟ್ಟ. ಇದೀಗ ನನ್ನನ್ನು ಒಂಟಿ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ತನ್ನ ಗೋಳು ತೋಡಿಕೊಂಡಿದ್ದಾರೆ.
 
ಇದು ನನ್ನ ಕೊನೆಯ ವಿಡಿಯೋ ಎಂದು ಹೇಳಿದ ನಟಿ ವಿಜಯಲಕ್ಷ್ಮಿ ಇನ್ನು ಎರಡು ದಿನದೊಳಗೆ ಕರ್ನಾಟಕದಲ್ಲೇ ನಾನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಹೇಳಿದ್ದಾರೆ. ನಾನು ಕರ್ನಾಟಕದಲ್ಲಿ ಸಾಯಲು ಸಿದ್ಧಳಾಗಿದ್ದೇನೆ. ಇದಕ್ಕೆಲ್ಲ ಸೀಮಾನ್​ ಕಾರಣ ಎಂದು ವಿಜಯಲಕ್ಷ್ಮಿ ಅವರು ವಿಡಿಯೋದಲ್ಲಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಎಂಗೇಜ್ ಮೆಂಟ್ ಮಾಡಿಕೊಂಡ ನನ್ನರಸಿ ರಾಧೆ ನಟಿ ಕೌಸ್ತುಭ ಮಣಿ