Publish Date: Mon, 05 Feb 2024 (16:21 IST)
Updated Date: Mon, 05 Feb 2024 (16:25 IST)
ಬೆಳಗಾವಿ :ಕಳೆದ ನಾಲ್ಕು ದಿನಗಳಿಂದ ಊಟವಿಲ್ಲದೇ ಹಸಿವಿನಿಂದ ಪರದಾಡುತ್ತಿದ್ದ ತಾಯಿ ಮಗನಿಗೆ ಎಲ್ಲೂ ಕೆಲಸವಾಗಲೀ, ತುತ್ತು ಅನ್ನವಾಗಲೀ ದೊರಕಿರಲಿಲ್ಲ. ಬಡತನದಿಂದ ಕಂಗೆಟ್ಟಿದ್ದ ಯುವಕನೊಬ್ಬ ಹಸಿವಿನಿಂದ ತಾಯಿ ನರಳುತ್ತಿರುವುದನ್ನು ನೋಡಲಾರದೇ ಆತ್ಮಹತ್ಯೆಗೆ ಶರಣಾಗಿರುವ ವಿದ್ರಾವಕ ಘಟನೆ ಖಾನಾಪುರದ ಲಿಂಗನಮಠದಲ್ಲಿ ನಡೆದಿದೆ. ಹಾವೇರಿ ಮೂಲದ ಬಸವರಾಜ ವೆಂಕಟ (30) ಮೃತ ಯುವಕನಾಗಿದ್ದು, ತಾಯಿ ಶಾಂತವ್ವನೊಡನೆ ಈತ ಕೂಲಿ ಕೆಲಸ ಮಾಡುತ್ತಿದ್ದ. ಕೆಲದಿನಗಳ ಹಿಂದಷ್ಟೇ ಕೂಲಿ ಕೆಲಸವನ್ನು ಅರಸಿಕೊಂಡು ತಾಯಿ ಮಗ ಇಬ್ಬರೂ ಗೋವಾಗೆ ತೆರಳಿದ್ದರು.
ಆದರೆ ಅಲ್ಲಿ ಸೂಕ್ತವಾದ ಕೆಲಸ ದೊರಕಿರಲಿಲ್ಲ. ಹೀಗಾಗಿ ರಾಜ್ಯಕ್ಕೆ ವಾಪಸಾಗುತ್ತಿದ್ದಾಗ ರೈಲಿನಲ್ಲಿ ಟಿಕೆಟ್ ಇಲ್ಲದ ಕಾರಣ ಇವರನ್ನು ಅಳ್ನಾವರದಲ್ಲಿ ಇಳಿಸಲಾಗಿತ್ತು. ಮೃತ ಬಸವವರಾಜ್ ನ ಶವವನ್ನು ಸ್ವಯಂ ಸೇವಾ ಸಂಸ್ಥೆ ಸಂಸ್ಕಾರ ನಡೆಸಿದ್ದು. ತಾಯಿಯನ್ನು ಅನಾಥಾಶ್ರಮವೊಂದಕ್ಕೆ ದಾಖಲಿಸಲಾಗಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.