ಬೆಂಗಳೂರು: ರಾಜ್ಯದಲ್ಲಿ ಪಂಚ ಗ್ಯಾರಂಟಿ ಘೋಷಣೆ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಸರಿಯಾಗಿ ಹಣ ಪಾವತಿ ಮಾಡದೇ ಮೋಸ ಮಾಡುತ್ತಿದೆ ಎಂಬ ಆಕ್ರೋಶ ಕೇಳಿಬಂದಿದೆ. ಅದರ ಗೃಹಲಕ್ಷ್ಮೀ ಹಣ ಬಾರದೇ ಮೂರು ತಿಂಗಳಾಗಿದೆ ಎಂದು ಸಚಿವ ಕೆಜೆ ಜಾರ್ಜ್ ರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ ಎಂದು ಉತ್ತರ ನೀಡಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಮನೆಯ ಯಜಮಾನಿ ಖಾತೆಗೆ ಹಾಕಬೇಕಾಗಿದ್ದ 2,000 ರೂ. ಹಣ ಹಾಕಿಲ್ಲ. ಅನ್ನಭಾಗ್ಯ ಯೋಜನೆಯ ಹಣವೂ ಜಮೆ ಆಗಿಲ್ಲ.
ಈ ಬಗ್ಗೆ ಇಂದು ಸಚಿವ ಕೆಜೆ ಜಾರ್ಜ್ ಗಮನ ಸೆಳೆದಾಗ, ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ? ಹಾಕ್ತಾರೆ ಬಿಡಿ ಎಂದು ಬೇಜವಾಬ್ಧಾರಿಯುತ ಉತ್ತರ ನೀಡಿದ್ದಾರೆ. ಗ್ಯಾರಂಟಿ ನೀಡುತ್ತೇವೆ ಎಂದು ಘೋಷಿಸಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರದ ಸಚಿವರಿಂದ ಇಂತಹ ಬೇಜವಾಬ್ಧಾರಿಯುತ ಉತ್ತರ ಬಂದಿರುವುದಕ್ಕೆ ಸಾರ್ವಜನಿಕಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಇನ್ನು ಗೃಹಲಕ್ಷ್ಮಿ ಹಣ ಪಾವತಿಯಾಗದೇ ಇರುವುದರ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ನಿನ್ನೆ ಹಣ ಬಂದಾಗ ಹಾಕುತ್ತೇವೆ ಎಂದು ಹಾರಿಕೆ ಉತ್ತರ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಯಾವುದೇ ಗ್ಯಾರಂಟಿ ನಿಲ್ಲಿಸಲ್ಲ, ಸದ್ಯದಲ್ಲೇ ಹಣ ಹಾಕುತ್ತೇವೆ ಎಂದು ಭರವಸೆ ನೀಡಿದ್ದರು.