ಬೆಂಗಳೂರು: ಈಗಾಗಲೇ ಬಸ್, ಮೆಟ್ರೊ ಪ್ರಯಾಣ ದರ ಏರಿಕೆಯಾಗಿ ಬೆಂಗಳೂರಿಗರು ಬವಣೆ ಪಡುತ್ತಿದ್ದಾರೆ. ಅದರ ನಡುವೆ ಕಾಫಿ ದರ ಏರಿಕೆ ಶಾಕ್ ಸಿಕ್ಕಿದೆ.
ಇದೀಗ ಜನತೆಗೆ ಕಾಫಿ ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಇದೇ ತಿಂಗಳ ಅಂತ್ಯದಿಂದ ಹೋಟೆಲ್ ಗಳಲ್ಲಿ ಕಾಫಿ ಬೆಲೆಯಲ್ಲಿ ಶೇ.15 ರಷ್ಟು ಏರಿಕೆ ಮಾಡಲು ಹೋಟೆಲ್ ಅಸೋಸಿಯೇಷನ್ ಗಳು ತೀರ್ಮಾನಿಸಿವೆ.
ಇದರಿಂದಾಗಿ ಇದೇ ತಿಂಗಳ ಅಂತ್ಯಕ್ಕೆ ಕಾಫಿ ದರ ಸುಮಾರು 5 ರೂ.ಗಳಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಹಾಲಿನ ದರ ಏರಿಕೆ ಹಾಗೂ ಇತರೆ ನಿರ್ವಹಣೆ ವೆಚ್ಚ ಏರಿಕೆಯಾಗಿರುವ ಹಿನ್ನಲೆಯಲ್ಲಿ ಕಾಫಿ ದರ ಏರಿಕೆ ಅನಿವಾರ್ಯ ಎನ್ನುವುದು ಹೋಟೆಲ್ ಮಾಲಿಕರ ಅಭಿಮತ.
ಈಗಾಗಲೇ ಸಾಮಾನ್ಯ ಹೋಟೆಲ್ ಗಳಲ್ಲಿ ಕಾಫಿ ಬೆಲೆ 10 ರೂ. ನಿಂದ 15 ರೂ.ವರೆಗೆ ಇದೆ. ಇನ್ನೀಗ 5 ರೂ.ಗಳಷ್ಟು ಹೆಚ್ಚಳವಾಗಲಿದೆ. ಇದರಿಂದ ಹೋಟೆಲ್ ಗಳಲ್ಲಿ ಕಾಫಿ ಸೇವನೆ ಎನ್ನುವುದು ಇನ್ನು ಮಧ್ಯಮ ವರ್ಗಕ್ಕೆ ಹೊರೆಯಾಗಲಿದೆ.