Publish Date: Wed, 29 Jan 2025 (11:58 IST)
Updated Date: Wed, 29 Jan 2025 (12:04 IST)
ಬೆಂಗಳೂರು: ಮುಂದಿನ ಕೆಲವು ದಿನಗಳಿಗೆ ಬೆಂಗಳೂರಿನಲ್ಲಿ ಹೋಟೆಲ್ ಗಳು ಬಲು ದುಬಾರಿಯಾಗಿದೆ. ಇದಕ್ಕೆ ಕಾರಣವೂ ಇದೆ. ಸುಮಾರು ಶೇ.30 ರಷ್ಟು ದರ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಏರ್ ಶೋ ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರ್ ಶೋ ನಡೆಯಲಿದೆ. ಈ ಏರ್ ಶೋಗೆ ದೇಶ-ವಿದೇಶದಿಂದ ಜನರು ವೀಕ್ಷಣೆಗೆ ಬರುತ್ತಿದ್ದಾರೆ.
ಇದೇ ಕಾರಣಕ್ಕೆ ಬೆಂಗಳೂರಿನ ಬಹುತೇಕ ಹೋಟೆಲ್ ಗಳಲ್ಲೂ ಬೇಡಿಕೆ ಜಾಸ್ತಿಯಾಗಿದೆ. ಒಂದೆರಡು ದಿನಗಳ ಮಟ್ಟಿಗೆ ಬೆಂಗಳೂರಿಗೆ ಬಂದು ಉಳಿದುಕೊಳ್ಳಲು ಹೋಟೆಲ್ ರೂಂಗಾಗಿ ಹುಡುಕಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಆನ್ ಲೈನ್ ನಲ್ಲಿ ಹೋಟೆಲ್ ರೂಂ ಬುಕಿಂಗ್ ಪ್ರಮಾಣ ಹೆಚ್ಚಾಗಿದೆ.
ಹೀಗಾಗಿ ಬೆಂಗಳೂರಿನ ಬಹುತೇಕ ಹೋಟೆಲ್ ಗಳ ರೂಂ ಬಾಡಿಗೆ ಶೇ.30 ರಷ್ಟು ಹೆಚ್ಚಾಗಿದೆ. ಏರ್ ಶೋ ದಿನ ಹತ್ತಿರ ಬರುತ್ತಿದ್ದಂತೇ ಹೋಟೆಲ್ ರೂಂ ಬಾಡಿಗೆ ದರ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಏರ್ ಶೋ ನೆಪದಲ್ಲಿ ಹೋಟೆಲ್ ಗಳಿಗೆ ಈಗ ಸುದ್ದಿ ಕಾಲ ಎನ್ನಬಹುದು.