Select Your Language

Notifications

webdunia
webdunia
webdunia
Sunday, 13 April 2025
webdunia

ಬೆಂಗಳೂರು ಏರ್ ಶೋಗೆ ಹೋಗಲು ಪ್ಲ್ಯಾನ್ ಮಾಡಿದ್ದೀರಾ, ಹಾಗಿದ್ದರೆ ಬಿಎಂಟಿಸಿಯಿಂದ ಗುಡ್ ನ್ಯೂಸ್

BMTC

Krishnaveni K

ಬೆಂಗಳೂರು , ಮಂಗಳವಾರ, 28 ಜನವರಿ 2025 (09:53 IST)
ಬೆಂಗಳೂರು: ಏರ್ ಇಂಡಿಯಾ ಶೋ 2025 ಆರಂಭವಾಗಲು ದಿನಗಣನೆ ಶುರುವಾಗಿದೆ. ಬೆಂಗಳೂರು ಏರ್ ಶೋಗೆ ಹೋಗಲು ಪ್ಲ್ಯಾನ್ ಮಾಡಿಕೊಂಡಿದ್ದರೆ ಬಿಎಂಟಿಸಿಯಿಂದ ಗುಡ್ ನ್ಯೂಸ್ ಕಾದಿದೆ.

ಏಷ್ಯಾದಲ್ಲೇ ಅತ್ಯಂತ ದೊಡ್ಡ ಏರ್ ಶೋ ಎಂದು ಖ್ಯಾತಿ ಪಡೆದಿರುವ ಬೆಂಗಳೂರು ಏರ್ ಶೋ 15 ನೇ ಆವೃತ್ತಿ ಫೆಬ್ರವರಿ 10 ರಿಂದ 14 ರವರೆಗೆ ನಡೆಯಲಿದೆ. ಯಲಹಂಕ ವಾಯುನೆಲೆಯಲ್ಲಿ ಎಂದಿನಂತೆ ಏರ್ ಶೋ ನಡೆಯಲಿದೆ. ಏರ್ ಶೋಗೆ ಲಕ್ಷಾಂತರ ದೇಶ-ವಿದೇಶದ ಜನರು ಬರುತ್ತಿದ್ದಾರೆ.

ಏರ್ ಶೋಗೆ ಬರುವವರಿಗಾಗಿ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ. ಏರ್ ಶೋಗೆ ಸ್ವಂತ ವಾಹನದಲ್ಲೇ ಬರುವವರಿದ್ದರೂ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಈ ಕಾರಣಕ್ಕೆ ಜಿಕೆವಿಕೆವರೆಗೆ ಸ್ವಂತ ವಾಹನದಲ್ಲಿ ಬಂದು ಅಲ್ಲಿ ವಾಹನ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ.

ಬಳಿಕ ಅಲ್ಲಿಂದ ಯಲಹಂಕ ವಾಯುನೆಲೆಗೆ ಬಿಎಂಟಿಸಿ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಿದೆ. ಈಗಾಗಲೇ 180 ಬಸ್ ಗಳನ್ನು ಬುಕ್ ಮಾಡಲಾಗಿದೆ. ಇದರಿಂದ ಏರ್ ಶೋಗೆ ಬರುವವರಿಗೆ ಅನುಕೂಲವಾಗಲಿದೆ. ಜೊತೆಗೆ ಟ್ರಾಫಿಕ್ ಸಮಸ್ಯೆಯೂ ತಪ್ಪುತ್ತದೆ. ಸಾರ್ವಜನಿಕರು ಈ ಉಚಿತ ಬಸ್ ವ್ಯವಸ್ಥೆಯ ಲಾಭ ಪಡೆದುಕೊಳ್ಳಬಹುದಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Kumbhmela: ಕುಂಭಮೇಳಕ್ಕೆ ಹೋಗಲು ಸುಲಭ ದಾರಿ ಯಾವುದು ಇಲ್ಲಿದೆ ಮಾಹಿತಿ