Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವ ಕೆಜೆ ಜಾರ್ಜ್ ಮಹತ್ವದ ಹೇಳಿಕೆ

Electricity

Krishnaveni K

ಬೆಂಗಳೂರು , ಮಂಗಳವಾರ, 18 ಫೆಬ್ರವರಿ 2025 (21:49 IST)
ಬೆಂಗಳೂರು: ಇನ್ನೇನು ಬೇಸಿಗೆ ಆರಂಭವಾಗಿದ್ದು, ರಾಜ್ಯದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದೆ. ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಇಂಧನ ಸಚಿವ ಕೆಜೆ ಜಾರ್ಜ್ ಮಹತ್ವದ ಮಾಹಿತಿ ನೀಡಿದ್ದಾರೆ.

ಇಂಧನ ಇಲಾಖೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಪಂಪ್ ಸೆಟ್ ಗಳಿಗೆ ಪ್ರತಿನಿತ್ಯ 7 ಗಂಟೆ ತ್ರೀ ಫೇಸ್ ಮತ್ತು ಮನೆ, ಕೈಗಾರಿಕಾ ಪ್ರದೇಶಗಳಿಗೆ 24 ಗಂಟೆ ವಿದ್ಯುತ್ ಪೂರೈಸುವುದು ಸರ್ಕಾರದ ಗುರಿಯಾಗಿದೆ ಎಂದಿದ್ದಾರೆ.

ಇಂದು ಬೆಂಗಳೂರಿನ ಕೆಲವೆಡೆ ಬಹುತೇಕ ದಿನವಿಡೀ ವಿದ್ಯುತ್ ಕಡಿತವಾಗಿತ್ತು. ಹೀಗಾಗಿ ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಸದ್ಯಕ್ಕೆ ರಾಜ್ಯದಲ್ಲಿ ವಿದ್ಯುತ್ ಕೊರತೆಯಿಲ್ಲ. ಹೀಗಾಗಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಹಾಗಿದ್ದರೂ ಕೆಲವು ನಿರ್ವಹಣೆ, ರಿಪೇರಿ ಕೆಲಸಗಳಿಗಾಗಿ ಕೆಲವೆಡೆ ವಿದ್ಯುತ್ ಕಡಿತ ಮಾಡಬಹುದು ಎಂದಿದ್ದಾರೆ. ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತದೆ. ಈ ಕಾರಣಕ್ಕೆ ಪಂಜಾಬ್, ಉತ್ತರ ಪ್ರದೇಶದಿಂದ ವಿದ್ಯುತ್ ಪಡೆಯಲಾಗುತ್ತದೆ. ರಾಜ್ಯದಲ್ಲಿ ಮಳೆಯಾಗಿ ವಿದ್ಯುತ್ ಉತ್ಪಾದನೆಯಾದಾಗ ಈ ರಾಜ್ಯಗಳಿಗೆ ಹಿಂದಿರುಗಿಸಲಾಗುವುದು ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದರೆ ತಿಂಗಳು ತಿಂಗಳು ಹಾಕಕ್ಕೆ ಸಂಬಳನಾ ಎಂದ ಸಚಿವ ಕೆಜೆ ಜಾರ್ಜ್