Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಬೇಸಿಗೆ ಇಫೆಕ್ಟ್: ಕೂಲರ್ ಗಳಿಗೆ ಹೆಚ್ಚಿದ ಬೇಡಿಕೆ

Air cooler

Krishnaveni K

ಬೆಂಗಳೂರು , ಬುಧವಾರ, 19 ಫೆಬ್ರವರಿ 2025 (08:45 IST)
Photo Credit: X
ಬೆಂಗಳೂರು: ರಾಜ್ಯಾದ್ಯಂತ ಈಗ ಭಾರೀ ಬಿಸಿಲು, ಸೆಖೆ ಶುರುವಾಗಿದ್ದು, ಅಂಗಡಿಗಳಲ್ಲಿ ಕೂಲರ್ ಗಳ ಖರೀದಿಗೆ ಈಗಾಗಲೇ ಜನ ಮುಗಿಬಿದ್ದಿದ್ದಾರೆ.

ಕಳೆದ ವರ್ಷವೂ ವಿಪರೀತ ಸೆಖೆಯಿಂದಾಗಿ ಜನ ತತ್ತರಿಸಿ ಹೋಗಿದ್ದರು. ಆದರೆ ಸದ್ಯದ ಹವಾಮಾನ ವರದಿಗಳ ಪ್ರಕಾರ ತಾಪಮಾನ ಕಳೆದ ವರ್ಷಕ್ಕಿಂತಲೂ  ಈ ವರ್ಷ ಹೆಚ್ಚಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಬೆಂಗಳೂರಿನಲ್ಲೇ 40 ಡಿಗ್ರಿ ತಲುಪಲಿದೆ ಎನ್ನಲಾಗಿದೆ.

ಹೀಗಾಗಿ ಬೇಸಿಗೆ ಎದುರಿಸಲು ಜನ ಈಗಿನಿಂದಲೇ ಸಜ್ಜಾಗಿದ್ದಾರೆ. ಕಳೆದ ವರ್ಷ ಬೆಂಗಳೂರಿನಲ್ಲಿ ನೀರಿನ ಕೊರತೆಯೂ ಆಗಿದ್ದರಿಂದ ಚಿಕ್ಕ ಗಾತ್ರದ ನೀರಿನ ಡ್ರಮ್ ಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಈ ವರ್ಷವೂ ನೀರಿನ ಸಮಸ್ಯೆ ತಪ್ಪಿದ್ದಲ್ಲ.

ಜೊತೆಗೆ ಸೆಖೆಗಾಲವನ್ನು ಎದುರಿಸಲು ಕೂಲರ್ ಗಳೂ ಬೇಡಿಕೆ ಹೆಚ್ಚಾಗಿದೆ. ಮನೆ ಸಾಮಗ್ರಿಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಈಗಾಗಲೇ ಕೂಲರ್ ಗಳ ಸ್ಟಾಕ್ ತರಿಸಲು ತಯಾರಿ ನಡೆದಿದೆ. ಬಹುತೇಕ ದೊಡ್ಡ ಗಾತ್ರದಿಂದ ಹಿಡಿದು ಚಿಕ್ಕ ಗಾತ್ರದ ಕೂಲರ್ ಗಳವರೆಗೆ ಜನ ಕೊಂಡುಕೊಳ್ಳಲು ಮುಂದೆ ಬರುತ್ತಿದ್ದಾರೆ. ವಿಶೇಷವಾಗಿ ಒಂದು ಕುಟುಂಬದ ಅವಶ್ಯಕತೆ ನೀಗಿಸಬಲ್ಲ. ಮಧ್ಯಮ ಗಾತ್ರದ ಕೂಲರ್ ಗಳಿಗೆ ಹೆಚ್ಚು ಬೇಡಿಕೆಯಿದೆ ಎಂದು ಮಾರಾಟಗಾರರೊಬ್ಬರು ಹೇಳುತ್ತಾರೆ. ಇತ್ತೀಚೆಗಿನ ಸೆಖೆಗಾಲದಲ್ಲಿ ಫ್ಯಾನ್ ಕೂಡಾ ಸಾಕಾಗುತ್ತಿಲ್ಲ. ಹೀಗಾಗಿ ಜನ ಎಸಿ, ಕೂಲರ್ ಗಳಿಗೇ ಮೊರೆ ಹೋಗುತ್ತಿದ್ದಾರೆ. ಜನರ ಅಗತ್ಯಕ್ಕೆ ತಕ್ಕಂತೆ ಬಜೆಟ್ ಗೆ ಹೊಂದುವ ವಿವಿಧ ಕೂಲರ್ ಗಳನ್ನು ತರಿಸಿಟ್ಟುಕೊಳ್ಳುತ್ತಿದ್ದೇವೆ ಎಂದು ಮಾರಾಟಗಾರರು ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವ ಕೆಜೆ ಜಾರ್ಜ್ ಮಹತ್ವದ ಹೇಳಿಕೆ