Publish Date: Sat, 07 Nov 2020 (06:09 IST)
Updated Date: Sat, 07 Nov 2020 (06:10 IST)
ಕಾನ್ಪುರ : ನಿವೃತ್ತ ಸೇನಾ ಅಧಿಕಾರಿಯೊಬ್ಬರು ತಮ್ಮ 80 ವರ್ಷದ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡಿದ ಘಟನೆ ನಸೀರ್ ಪುರದ ಗ್ರಾಮವೊಂದರಲ್ಲಿ ನಡೆದಿದೆ.
ಅಶೋಕ್ ಕಟಿಹಾರ್ ಕೊಲೆ ಮಾಡಿದ ನಿವೃತ್ತ ಸೇನಾ ಅಧಿಕಾರಿ, ಲಾಲಾ ರಾಮ್ ಕೊಲೆಯಾದ ತಂದೆ. ಮದ್ಯಪಾನ ವ್ಯಸನಿಯಾಗಿದ್ದ ಅಶೋಕ್ ಟಿವಿ ನೋಡುತ್ತಿದ್ದ ತಂದೆಗೆ ಟಿವಿ ಆಫ್ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ತಂದೆ ಅವನ ಮಾತನ್ನು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಮಗ ಪರವಾನಗಿ ಪಡೆದ ಡಬಲ್ ಬ್ಯಾರೆಲ್ ಗನ್ ನಿಂದ ತಂದೆ ಗುಂಡು ಹಾರಿಸಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಪೊಲೀಸರ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.