Publish Date: Thu, 05 Nov 2020 (10:22 IST)
Updated Date: Thu, 05 Nov 2020 (10:24 IST)
ಧಾರವಾಡ : ಧಾರವಾಡದ ಜಿ.ಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ್ ಕುಲಕರ್ಣಿಯನ್ನೂ ಸಿಬಿಐ ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ವಿದ್ಯಾನಗರದ ಮನೆಯಲ್ಲಿ ವಿಜಯ್ ಸಿಬಿಐ ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ 6.15ಕ್ಕೆ ಧಾರವಾಡದಲ್ಲಿರುವ ವಿನಯ್ ಕುಲಕರ್ಣಿ ನಿವಾಸಕ್ಕೆ ಸಿಬಿಐ ಭೇಟಿ ನೀಡಿ ಬೆಳಿಗ್ಗೆ 7 ಗಂಟೆಗೆ ಮಾಜಿಸ ಚಿವ ವಿನಯ್ ಕುಲಕರ್ಣಿ ವಶಕ್ಕೆ ಪಡೆದಿದ್ದಾರೆ. ಬಳಿಕ ವಿನಯ್ ಕುಲಕರ್ಣಿ ಸ್ವಂತ ಕಾರಿನಲ್ಲಿ ಠಾಣೆಗೆ ಬಂದಿದ್ದು, ಉಪನಗರ ಠಾಣೆಯಲ್ಲಿ ವಿನಯ್ ಕುಲಕರ್ಣಿ ವಿಚಾರಣೆ ನಡೆಸಲಾಗುತ್ತಿದೆ.