ಬೆಂಗಳೂರು : ಕೆ.ಜಿ ಹಳ್ಳಿ, ಡಿಜಿ ಹಳ್ಳಿ ಗಲಭೆ ಕೇಸ್ ಗೆ ಸಂಬಂಧಿಸಿದಂತೆ NIA ಕಾಂಗ್ರೆಸ್ ಶಾಸಕರಿಬ್ಬರ ವಿಚಾರಣೆ ನಡೆಸಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
NIA ಕಚೇರಿಯಲ್ಲಿ ಕಾಂಗ್ರೆಸ್ ಶಾಸಕರಾದ ಜಮೀರ್, ರಿಜ್ವಾನ್ ವಿಚಾರಣೆ ನಡೆಸಲಾಯಿತು. ಸೋಮವಾರ ರಿಜ್ವಾನ್, ಮಂಗಳವಾರ ಜಮೀರ್ ವಿಚಾರಣೆ ನಡೆಸಲಾಗಿದೆ. ನೀವು ಪ್ರತಿಭಟನಾ ಸ್ಥಳಕ್ಕೆ ಹೋಗುವ ಅಗತ್ಯ ಏನಿತ್ತು? ನಿಮ್ಮ ಭೇಟಿ ಹಿಂಸೆಗೆ ಪ್ರೇರಣೆ ಆಗಲಿಲ್ವೇ? ಯಾವ ಉದ್ದೇಶದಿಂದ ಗಲಭೆ ನಡೆದಿದೆ? ಎಂದು ಇಬ್ಬರು ಶಾಸಕರಿಗೆ NIA ಪ್ರಶ್ನೆಗಳ ಸುರಿಮಳೆ ಹಾಕಿದೆ ಎನ್ನಲಾಗಿದೆ.
ಬಳಿಕ ಇಬ್ಬರು ಶಾಸಕರಿಂದ ಲಿಖಿತ ಹೇಳಿಕೆ ಪಡೆದ NIA ಶಾಸಕರನ್ನು ಕಳಿಸಿದೆ ಎನ್ನಲಾಗಿದೆ. ಅಗತ್ಯ ಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗಬೇಕು ಎಂದು ಶಾಸಕರಾದ ಜಮೀರ್, ರಿಜ್ವಾನ್ ಗೆ NIA ಸೂಚಿಸಿದೆ ಎನ್ನಲಾಗಿದೆ.