Publish Date: Tue, 13 Oct 2020 (11:25 IST)
Updated Date: Tue, 13 Oct 2020 (11:26 IST)
ಬೆಂಗಳೂರು : ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಹಾಗೂ ಸಚಿವ ಸುಧಾಕರ್ ನಡುವೆ ಸಿಎಂ ನಡೆಸಿದ ಸಂಧಾನ ಸಕ್ಸಸ್ ಆಗಿದೆ ಎಂಬುದಾಗಿ ತಿಳಿದುಬಂದಿದೆ.
ರಾಮುಲು ಮನಸ್ಸಿಗೆ ನೋವಾಗೋ ಹೇಳಿಕೆ ಬೇಡ ಎಂದು ಸಿಎಂ ಬಿಎಸ್ ವೈ ಸಚಿವ ಡಾ.ಸುಧಾಕರ್ ಗೆ ಸೂಚನೆ ನೀಡಿದ್ದಾರೆ. ಹಾಗೇ ಕೊರೊನಾ ತಡೆಯಲ್ಲಿ ರಾಮುಲು ಪಾತ್ರ ಮಹತ್ವದ್ದು. ರಾಮುಲು ಆರೋಗ್ಯ ಖಾತೆ ಸಮರ್ಪಕವಾಗಿ ನಿರ್ವಹಿಸಿದ್ದಾರೆ. ಇಲಾಖೆಗಳ ಸಮನ್ವಯಕ್ಕಾಗಿ ಖಾತೆ ಬದಲಾವಣೆ ಮಾಡಲಾಗಿದೆ. ಎರಡು ಖಾತೆ ಒಂದರ ಮೇಲೊಂದು ಅವಲಂಭಿತವಾಗಿದೆ. ಹೀಗಾಗಿ ಶ್ರೀರಾಮುಲು ಖಾತೆ ಬದಲಾಗಿದೆ ಎಂದು ಮಾಹಿತಿ ನೀಡುವುದರ ಮೂಲಕ ಇಬ್ಬರ ನಡುವಿನ ಅಸಮಾಧಾನಕ್ಕೆ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.