Publish Date: Tue, 13 Oct 2020 (11:23 IST)
Updated Date: Tue, 13 Oct 2020 (11:24 IST)
ಬೆಂಗಳೂರು : ಸಚಿವ ಬಿ.ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸಚಿವ ಶ್ರೀರಾಮುಲು ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ.
ಈಗಾಗಲೇ ಖಾತೆ ಬದಲಾವಣೆಯಿಂದ ಸಚಿವ ಶ್ರೀರಾಮುಲು ಅಅಸಮಾಧಾನಗೊಂಡಿದ್ದು, ಈ ಹಿನ್ನಲೆಯಲ್ಲಿ ನಿನ್ನೆಯಿಂದ ತಮ್ಮ ಖಾಸಗಿ ಕಾರಿನಲ್ಲಿ ತಿರುಗಾಡುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಇಂದು ಸಚಿವ ಸುಧಾಕರ್ ಕೂಡ ಸಿಎಂ ನ್ನು ಭೇಟಿಯಾಗಿದ್ದು, ಇಬ್ಬರ ನಡುವಿನ ಅಸಮಾಧಾನವನ್ನು ಶಮನ ಮಾಡಲು ಸಿಎಂ ಫೀಲ್ಡ್ ಗಿಳಿದಿದ್ದು, ಇಬ್ಬರ ಸಮ್ಮುಖದಲ್ಲಿಯೇ ಸಂಧಾನ ಮಾಡಲು ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.