Publish Date: Thu, 05 Nov 2020 (10:20 IST)
Updated Date: Thu, 05 Nov 2020 (10:22 IST)
ಮಂಗಳೂರು : ಕಾಂಗ್ರೆಸ್ ನ ಮಾಜಿ ಸಚಿವ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರೇರಣೆಯಿಂದ ಕೆಲಸ ಮಾಡುತ್ತಿದೆ ಎಂಬ ಕಾಂಗ್ರೆಸ್ ನ ಆರೋಪಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಪ್ರಕಾರವೇ ಸಿಬಿಐ ತನಿಖೆಯನ್ನು ಮಾಡುತ್ತಿದೆ. ತನಿಖೆ ಪರಿಶೀಲನೆ ಬಳಿಕ ಸಿಬಿಐನಿಂದ ಕಾನೂನು ಕ್ರಮ. ಕಾಂಗ್ರೆಸ್ ಎಲ್ಲದರಲ್ಲೂ ರಾಜಕೀಯ ಮಾಡುವ ಹುಚ್ಚಿದೆ. ಕಾಂಗ್ರೆಸ್ ಆಡಳಿತದಲ್ಲೂ ಸಿಬಿಐ ದಾಳಿ, ಬಂಧನ ಆಗುತ್ತಿತ್ತು. ಆಗ ಸಿಬಿಐ ಅವರ ಪ್ರೇರಣೆಯಲ್ಲೇ ಕೆಲಸ ಮಾಡುತ್ತಿತ್ತಾ?ಎಂದು ಪ್ರಶ್ನಿಸಿದ್ದಾರೆ.