Publish Date: Tue, 06 Oct 2020 (11:12 IST)
Updated Date: Tue, 06 Oct 2020 (11:14 IST)
ಬೆಂಗಳೂರು : . ಬಿಜೆಪಿ ಸೇರಲು ಕಾಂಗ್ರೆಸ್ ನಾಯಕ ವಿನಯ್ ಕುಲಕರ್ಣಿ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಿಬಿಐ ತನಿಖೆ ಚುರುಕಾಗ್ತಿದ್ದಂತೆ ಬಿಜೆಪಿ ಸೇರಲು ವಿನಯ್ ಕುಲಕರ್ಣಿ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಸೇರಿ ಸಿಬಿಐ ತನಿಖೆ ತಪ್ಪಿಸಿಕೊಳ್ಳುವ ಲೆಕ್ಕಾಚಾರ ಅವರದಾಗಿದೆ ಎನ್ನಲಾಗಿದೆ.ಆದಕಾರಣ ಕುಲಕರ್ಣಿ ಮೈಸೂರು ಭಾಗದ ನಾಯಕರ ಭೇಟಿಯಾಗಿದ್ದಾರೆ. ನಾಗಪುರ, ರಾಜಸ್ಥಾನದ ಪುಷ್ಕರಕ್ಕೂ ಅವರ ಯಾತ್ರೆ ಹೋಗಿತ್ತು.
ಕುಲಕರ್ಣಿಗೆ ಹಳೇ ಮೈಸೂರು ರಾಜಕಾರಣಿ ಸಾಥ್ ನೀಡಿದ್ದು, ಸದಾನಂದಗೌಡರ ಭೇಟಿಗೆ ಮಾಜಿ ಸಚಿವರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಬಿಎಲ್ ಸಂತೋಷ್ ಭೇಟಿಗೂ ಕುಲಕರ್ಣಿ ಪ್ರಯತ್ನ ನಡೆಸುತ್ತಿದ್ದು. ಆದರೆ ಬಿಜೆಪಿ ಸೇರಲು ವರಿಷ್ಠರು ಒಪ್ಪುತ್ತಿಲ್ಲ ಎನ್ನಲಾಗಿದೆ.