Select Your Language

Notifications

webdunia
webdunia
webdunia
webdunia

ಡ್ರಗ್ ಮಾಫಿಯಾ: ಸ್ಯಾಂಡಲ್ ವುಡ್ ನಿರ್ಮಾಪಕ ದಂಪತಿ ವಿಚಾರಣೆ

ಡ್ರಗ್ ಮಾಫಿಯಾ: ಸ್ಯಾಂಡಲ್ ವುಡ್ ನಿರ್ಮಾಪಕ ದಂಪತಿ ವಿಚಾರಣೆ
ಬೆಂಗಳೂರು , ಗುರುವಾರ, 22 ಅಕ್ಟೋಬರ್ 2020 (09:53 IST)
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಜಗದೀಶ್ ಮತ್ತು ಪತ್ನಿ ಸೌಂದರ್ಯ ಜಗದೀಶ್ ಅವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.


ಇವರಲ್ಲದೆ ಕಾಂಗ್ರೆಸ್ ವಿಧಾನಸಭಾ ಪರಿಷತ್ ಸದಸ್ಯ ಯು ಬಿ ವೆಂಕಟೇಶ‍್ ಪುತ್ರ ಮತ್ತು ರಾಯಲ್ ಮೀನಾಕ್ಷಿ ಮಾಲ್ ಮಾಲಿಕ ವಿ ಗಣೇಶ್ ರಾವ್ ಅವರನ್ನು ಸಿಸಿಬಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಈಗಾಗಲೇ ಡ್ರಗ್ ಮಾಫಿಯಾದಲ್ಲಿ ಬಂಧಿತರಾಗಿರುವ ಸಂಜನಾ ಗಲ್ರಾನಿ ಜತೆ ಸಂಪರ್ಕವಿದ್ದ ಹಿನ್ನಲೆಯಲ್ಲಿ ಇವರೆಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದೆ.  ಗಣೇಶ್ ರಾವ್ ಗೆ ಸಂಜನಾ ಜತೆ ವ್ಯಾವಹರಿಕ ಸಂಬಂಧವೂ ಇತ್ತು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೆಟ್ಟಿಗರ ಚುಚ್ಚು ಮಾತಿನಿಂದ ಬೇಸರಗೊಂಡ ನಟ ಅನಿರುದ್ಧ್