ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಸಂಸದ ತೇಜಸ್ವಿ ಸೂರ್ಯ ಜತೆಗೆ ಪ್ರಕಟಿಸಿದ ಫೋಟೋವೊಂದು ನೆಟ್ಟಿಗರಿಂದ ತೀರಾ ಟೀಕೆಗೊಳಗಾಗಿದೆ.
									
										
								
																	
ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿ ಮಾಡಿದ ಫೋಟೋ ಪ್ರಕಟಿಸಿದ್ದ ಅನಿರುದ್ಧ್ ಗೆ ಕೆಲವರು ತೀರಾ ಋಣಾತ್ಮಕವಾಗಿ ಕಾಮೆಂಟ್ ಮಾಡಿದ್ದರು. ನಿಮ್ಮ ಮೇಲೆ ನಮಗೆ ಗೌರವವಿದೆ. ರಾಜಕೀಯ ನಾಯಕರನ್ನು ಯಾಕೆ ಭೇಟಿ ಮಾಡುತ್ತೀರಿ? ಅವರ ಜತೆಗಿನ ಫೋಟೋ ಪ್ರಕಟಿಸಿ ಸರ್ ಎಂದೆಲ್ಲಾ ಕರೆಯುವ ಅಗತ್ಯವೇನಿದೆ ಎಂದು ಹಲವರು ಟೀಕೆ ಮಾಡಿದ್ದರು.
									
			
			 
 			
 
 			
			                     
							
							
			        							
								
																	ಇದರಿಂದ ನೊಂದ ನಟ ಅನಿರುದ್ಧ್ ಮತ್ತೊಂದು ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ‘ನಾನು ಅಪ್ಪಾವ್ರ ಸ್ಮಾರಕದ ವಿಚಾರವಾಗಿ ಹಲವಾರು ರಾಜಕೀಯ ವ್ಯಕ್ತಿಗಳನ್ನು ಭೇಟಿ ಮಾಡಿದ್ದೇನೆ, ಮುಂದೆ ಕೂಡಾ ಮಾಡಲೇಬೇಕು ಮತ್ತು ಮಾಡುತ್ತೇನೆ ಕೂಡಾ. ವಿಷಯ ಗೊತ್ತಿಲ್ಲದೇ ಕೆಲವರು ನಕಾರಾತ್ಮ ಸಂದೇಶಗಳನ್ನು ಬರೆದಿದ್ದಾರೆ. ಆದ್ರೆ ಎಷ್ಟೋ ಅಭಿಮಾನಿಗಳು ಅವುಗಳಿಗೆ ಸಕಾರಾತ್ಮಕ ಸಂದೇಶಗಳನ್ನು ಬರೆದಿದ್ದೀರ. ತಮ್ಮ ಪ್ರೀತಿಗೆ ಚಿರ ಋಣಿ. ನಾನು ಅವರನ್ನು ಯಾಕೆ ಭೇಟಿ ಮಾಡಿದ್ದೇನೆ ಎನ್ನುವುದು ಮುಂದಿನ ದಿನಗಳಲ್ಲಿ ತಮ್ಮೆಲ್ಲರಿಗೂ ಗೊತ್ತಾಗಲಿದೆ. ಸ್ಮಾರಕಕ್ಕೆ ಅವರಿಗೆ ಏನು ಸಂಬಂಧ ಎಲ್ಲವೂ ಗೊತ್ತಾಗುತ್ತದೆ’ ಎಂದು ಸ್ಪಷ್ಟನೆ ನೀಡಿದ್ದಾರೆ. ಅನಿರುದ್ಧ್ ಈ ಹೇಳಿಕೆಗೆ ಹಲವರು ಬೆಂಬಲಿಸಿದ್ದು, ನಿಮ್ಮ ಮೇಲೆ ನಮಗೆ ನಂಬಿಕೆಯಿದೆ. ಟೀಕೆಗಳಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಾಂತ್ವನ ಮಾಡಿದ್ದಾರೆ.