Publish Date: Thu, 22 Oct 2020 (09:26 IST)
Updated Date: Thu, 22 Oct 2020 (09:29 IST)
ಬೆಂಗಳೂರು: ಕೆಜಿಎಫ್ 2 ಚಿತ್ರತಂಡ ನಿನ್ನೆ ಒಂದೇ ದಿನ ಎರಡು ಗುಡ್ ನ್ಯೂಸ್ ಕೊಟ್ಟಿದೆ. ಒಂದು ನಾಯಕಿ ಶ್ರೀನಿಧಿ ಶೆಟ್ಟಿ ಕಡೆಯಿಂದ, ಇನ್ನೊಂದು ವಿಲನ್ ಸಂಜಯ್ ದತ್ ರಿಂದ.
ಶ್ರೀನಿಧಿ ಶೆಟ್ಟಿ ನಿನ್ನೆ ಜನ್ಮದಿನ ಆಚರಿಸಿಕೊಂಡಿದ್ದರು. ಹೀಗಾಗಿ ಕೆಜಿಎಫ್ 2 ಚಿತ್ರ ಅವರ ವಿಶೇಷ ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಇನ್ನೊಂದು, ಸಂಜಯ್ ದತ್ ಕಡೆಯಿಂದ ಸಿಹಿ ಸುದ್ದಿ ಸಿಕ್ಕಿದೆ. ಅಧೀರ ಪಾತ್ರ ಮಾಡುತ್ತಿರುವ ಸಂಜಯ್ ದತ್ ಶ್ವಾಸಕೋಶ ಸಂಬಂಧೀ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಇದರ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದಾಗ ಅಭಿಮಾನಿಗಳಲ್ಲಿ ಅವರು ಮರಳಿ ಕೆಜಿಎಫ್ 2 ಚಿತ್ರತಂಡ ಕೂಡಿಕೊಳ್ಳಲ್ವಾ ಎಂಬ ಆತಂಕವಿತ್ತು. ಆದರೆ ಸಂಜಯ್ ದತ್ ನಿನ್ನೆ ತಾವು ಕ್ಯಾನ್ಸರ್ ನಿಂದ ಗುಣಮುಖರಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದು ಕೆಜಿಎಫ್ ಅಭಿಮಾನಿಗಳಿಗೆ ಖುಷಿ ತಂದಿದೆ.