Publish Date: Wed, 21 Oct 2020 (11:47 IST)
Updated Date: Wed, 21 Oct 2020 (11:48 IST)
ಬೆಂಗಳೂರು: ಜೇಮ್ಸ್ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಕುಟುಂಬ ವರ್ಗ, ಸ್ನೇಹಿತರೊಡನೆ ಜಾಲಿ ಟೈಂ ಕಳೆದಿದ್ದಾರೆ.
ರಾತ್ರಿ ತುಂಗ ಭದ್ರಾ ಜಲಾಶಯಕ್ಕೆ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಸೇರಿದಂತೆ ಕುಟುಂಬ ವರ್ಗದವರು, ಸ್ನೇಹಿತರ ಕುಟುಂಬಸ್ಥರೊಂದಿಗೆ ಆಗಮಿಸಿದ ಪುನೀತ್ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಜೆಯ ಸುಂದರ ಕ್ಷಣಗಳನ್ನು ಜಾಲಿಯಾಗಿ ಕಳೆದಿದ್ದಾರೆ. ಈ ಫೋಟೋಗಳು ಈಗ ವೈರಲ್ ಆಗಿದೆ. ಜೇಮ್ಸ್ ಚಿತ್ರೀಕರಣಕ್ಕಾಗಿ ಪುನೀತ್ ಕೆಲವು ದಿನಗಳಿಂದ ಇಲ್ಲಿದ್ದಾರೆ.