ಬೆಂಗಳೂರು: ನಟಿ ಪ್ರಿಯಾಂಕ ಉಪೇಂದ್ರ ಮತ್ತೊಂದು ಥ್ರಿಲ್ಲರ್ ಸಿನಿಮಾ ಒಪ್ಪಿಕೊಂಡಿದ್ದಾರೆ. ಈಗಾಗಲೇ ಉಗ್ರಾವತಾರ ಸಿನಿಮಾ ಮಾಡುತ್ತಿರುವ ಪ್ರಿಯಾಂಕ 1980 ಎಂಬ ಟೈಟಲ್ ನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಅಕ್ಟೋಬರ್ 28 ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಜ್ ಕಿರಣ್ ಈ ಚಿತ್ರದ ನಿರ್ದೇಶಕರು. ಕೊಡುಗಿನ ಸುಂದರ ವಾತಾವರಣದಲ್ಲಿ ಚಿತ್ರೀಕರಣ ನಡೆಯಲಿದೆ. ಈ ಸಿನಿಮಾ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರವನ್ನು ಒಳಗೊಂಡಿದೆ. ಈಗಾಗಲೇ, ಮಮ್ಮಿ, ದೇವಕಿ ಮುಂತಾದ ಥ್ರಿಲ್ಲರ್ ಸಿನಿಮಾಗಳನ್ನು ಮಾಡಿರುವ ಪ್ರಿಯಾಂಕ ಈಗ ಮತ್ತೊಮ್ಮೆ ಅಂತಹದ್ದೇ ಸಿನಿಮಾ ಮಾಡಲಿದ್ದಾರೆ.