Publish Date: Mon, 19 Oct 2020 (12:03 IST)
Updated Date: Mon, 19 Oct 2020 (12:05 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ರಿಲೀಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಓಡಾಡುತ್ತಿದೆ.
ಲಾಕ್ ಡೌನ್ ಬಳಿಕ ಥಿಯೇಟರ್ ತೆರೆದ ತಕ್ಷಣವೇ ಅಭಿಮಾನಿಗಳು ರಾಬರ್ಟ್ ಬಿಡುಗಡೆ ಯಾವಾಗ ಎಂದು ಕೇಳುತ್ತಲೇ ಇದ್ದರು. ಮೂಲಗಳ ಪ್ರಕಾರ ಡಿಸೆಂಬರ್ 25 ರಂದು ಅಂದರೆ ಕ್ರಿಸ್ ಮಸ್ ಗೆ ರಾಬರ್ಟ್ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದರೆ ನಿರ್ದೇಶಕರು, ನಿರ್ಮಾಪಕರಿಂದ ಈ ಬಗ್ಗೆ ಇನ್ನೂ ಸ್ಪಷ್ಟನೆ ಬಂದಿಲ್ಲ.