ಬೆಂಗಳೂರು: ಲಾಕ್ ಡೌನ್ ಬಳಿಕ ಥಿಯೇಟರ್ ಮೊನ್ನೆಯಷ್ಟೇ ತೆರೆದಿದೆ. ಆದರೆ ಈ ವಾರ ಈಗಾಗಲೇ ರಿಲೀಸ್ ಆದ ಸಿನಿಮಾಗಳೇ ಮರು ರಿಲೀಸ್ ಆಗಿದೆ.
ಮುಂದಿನ ವಾರ ಹೊಸ ಸಿನಿಮಾವೊಂದು ರಿಲೀಸ್ ಆಗಲಿದ್ದು, ಲಾಕ್ ಡೌನ್ ಬಳಿಕ ಮೊದಲು ಬಿಡುಗಡೆಯಾಗುತ್ತಿರುವ ಹೊಸ ಸಿನಿಮಾ ಎಂಬ ಖ್ಯಾತಿಗೆ ಒಳಗಾಗಲಿದೆ. ರವಿಶಂಕರ್ ಗೌಡ, ಕುರಿ ಶಿವರಾಜ್ ಕೆ ಆರ್ ಪೇಟೆ ಮುಖ್ಯಪಾತ್ರದಲ್ಲಿ ಅಭಿನಯಿಸಿರುವ ಪುರುಸೊತ್ ರಾಮ ಎಂಬ ಪಕ್ಕಾ ಎಂಟರ್ ಟೈನರ್ ಸಿನಿಮಾ ಬಿಡುಗಡೆಯಾಗಲಿದೆ. ಇದು ಲಾಕ್ ಡೌನ್ ಬಳಿಕ ಬಿಡುಗಡೆಯಾದ ಮೊದಲ ಸಿನಿಮಾವಾಗಲಿದೆ.