Publish Date: Thu, 05 Nov 2020 (06:17 IST)
Updated Date: Thu, 05 Nov 2020 (06:19 IST)
ಮುಂಬೈ : ತನ್ನ ಅಪ್ರಾಪ್ತ ಸೋದರ ಸಂಬಂಧಿಯ ಮೇಲೆ ಮಾನಭಂಗ ಎಸಗಿದ ಆರೋಪದ ಮೇಲೆ ನಗರ ಮೂಲದ ಆರ್ ಟಿಐ ಕಾರ್ಯಕರ್ತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.
17 ವರ್ಷ ಸಂತ್ರಸ್ತೆ ಹಾಗೂ ಆರ್ ಟಿಐ ಕಾರ್ಯಕರ್ತ ಒಂದೇ ನಗರದಲ್ಲಿ ವಾಸವಾಗಿದ್ದಾರೆ. ಆತ ಸಂತ್ರಸ್ತೆಯ ಮೇಲೆ ಮಾನಭಂಗ ಎಸಗಿದ ಹಿನ್ನಲೆಯಲ್ಲಿ ಸಂತ್ರಸ್ತೆ ತನ್ನ ತಾಯಿಯ ಜೊತೆಗೆ ಮಾಲ್ವಾನಿ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾಳೆ.
ಈ ಬಗ್ಗೆ ಪೊಲೀಸರು ಐಪಿಸಿ ಸೆಕ್ಷನ್ 376 ಮತ್ತು ಪೊಕ್ಸೊ ಕಾಯ್ದೆಯಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ಪರಾರಿಯಾದ ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.