Publish Date: Tue, 03 Nov 2020 (10:31 IST)
Updated Date: Tue, 03 Nov 2020 (10:32 IST)
ದುಬೈ: ಐಪಿಎಲ್ 13 ರಲ್ಲಿ ಇಂದು ನಡೆಯಲಿರುವ ಪಂದ್ಯವನ್ನು ಬೆಂಗಳೂರು, ಡೆಲ್ಲಿ ತಂಡಗಳೂ ಕುತೂಹಲದಿಂದ ಎದಿರು ನೋಡುವಂತೆ ಮಾಡಿದೆ.
ಇಂದು ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ದೊಡ್ಡ ಅಂತರದಿಂದ ಗೆಲ್ಲದೇ ಇರಲಿ ಎಂದು ಆರ್ ಸಿಬಿ, ಡೆಲ್ಲಿ ಪ್ರಾರ್ಥಿಸುತ್ತಿದೆ. ಇಂದು ಮುಂಬೈ ಗೆದ್ದರೆ ಎರಡೂ ತಂಡಗಳಿಗೂ ನಿರಾತಂಕ. ಇಬ್ಬರ ಪ್ಲೇ ಆಫ್ ಹಾದಿಯೂ ಸುಗಮವಾಗಲಿದೆ. ಒಂದು ವೇಳೆ ಹೈದರಾಬಾದ್ ಗೆದ್ದರೆ ಹೆಚ್ಚು ಕುತ್ತು ಇರುವುದು ಡೆಲ್ಲಿಗೆ. ಇನ್ನು, ಕೊನೆಯ ಹಂತದಲ್ಲಿ ಸಿಡಿದೆದ್ದಿರುವ ಹೈದರಾಬಾದ್ ಗೆ ಈಗ ಮುಂಬೈಯನ್ನು ಕಟ್ಟಿಹಾಕಿ ಪ್ಲೇ ಆಫ್ ರೇಸ್ ನಲ್ಲಿ ಸ್ಥಾನ ಉಳಿಸಿಕೊಳ್ಳುವ ಉತ್ಸಾಹವಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ ಮಹತ್ವ ಬಂದಿದೆ. ಇಂದು ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದೆ.