Publish Date: Mon, 02 Nov 2020 (12:36 IST)
Updated Date: Mon, 02 Nov 2020 (12:38 IST)
ದುಬೈ: ಐಪಿಎಲ್ ಫ್ರಾಂಚೈಸಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮಾಲಿಕ, ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಗೆ ಇಂದು ಜನ್ಮದಿನದ ಸಂಭ್ರಮ. ಈ ಹಿನ್ನಲೆಯಲ್ಲಿ ಕೆಕೆಆರ್ ತಂಡದ ಕ್ರಿಕೆಟಿಗರು ಕಿಂಗ್ ಖಾನ್ ಗೆ ಬರ್ತ್ ಡೇ ವಿಶ್ ಮಾಡಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಗೆಲುವು ದಾಖಲಿಸಿ ಸಹ ಮಾಲಿಕ ಶಾರುಖ‍್ ಖಾನ್ ಗೆ ಕೆಕೆಆರ್ ತಕ್ಕ ಉಡುಗೊರೆಯನ್ನೇ ಕೊಟ್ಟಿದೆ. ಇನ್ನು, ಶಾರುಖ್ ಗೆ ಕೆಕೆಆರ್ ಫ‍್ರಾಂಚೈಸಿ, ಮಾಜಿ ನಾಯಕ ದಿನೇಶ್ ಕಾರ್ತಿಕ್, ನಾಯಕ ಇಯಾನ್ ಮಾರ್ಗನ್ ಸೇರಿದಂತೆ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ತಿಳಿಸಿದ್ದಾರೆ.
Krishnaveni K
Publish Date: Mon, 02 Nov 2020 (12:36 IST)
Updated Date: Mon, 02 Nov 2020 (12:38 IST)