Publish Date: Mon, 02 Nov 2020 (12:05 IST)
Updated Date: Mon, 02 Nov 2020 (12:06 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರ ಕಿಟ್ ಗೆ ಇನ್ನು ಎಂಪಿಎಲ್ ಪ್ರಾಯೋಜಕತ್ವ ವಹಿಸಲಿದೆ. ಇದಕ್ಕಾಗಿ ಬಿಸಿಸಿಐ ಆ ಸಂಸ್ಥೆಯೊಂದಿಗೆ 120 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿದೆ.
ಮುಂದಿನ ಮೂರು ವರ್ಷಗಳಿಗೆ ಈ ಒಪ್ಪಂದ ಜಾರಿಯಲ್ಲಿರಲಿದೆ. ಇತ್ತೀಚೆಗಷ್ಟೇ ಬಿಸಿಸಿಐ ಕ್ರಿಕೆಟಿಗ ಕಿಟ್ ಪ್ರಾಯೋಜಕರಿಗಾಗಿ ಹೊಸದಾಗಿ ಬಿಡ್ ಸಲ್ಲಿಸಲು ಆಹ್ವಾನ ನೀಡಿತ್ತು. ಇದೀಗ ಅದನ್ನು ಕ್ರಿಕೆಟ್ ಪರಿಕರಗಳ ಬ್ರ್ಯಾಂಡ್ ಕಂಪನಿಯಾಗಿರುವ ಎಂಪಿಎಲ್ ತನ್ನದಾಗಿಸಿಕೊಂಡಿದೆ. ಇದರಲ್ಲಿ ಪ್ರತೀ ಪಂದ್ಯದ ಕಿಟ್ ಗೆ 65 ಲಕ್ಷ ರೂ. ಅದರ ಸಾಗಣೆಗೆ ಪ್ರತೀ ವರ್ಷಕ್ಕೆ 3 ಕೋಟಿ ರೂ. ಒಳಗೊಂಡಿದೆ.