Select Your Language

Notifications

webdunia
webdunia
webdunia
webdunia

ಐಪಿಎಲ್ 13: ಸೋತರೂ ಬೆಂಗಳೂರು ಪ್ಲೇ ಆಫ್ ಗೆ

ಐಪಿಎಲ್ 13: ಸೋತರೂ ಬೆಂಗಳೂರು ಪ್ಲೇ ಆಫ್ ಗೆ
ದುಬೈ , ಮಂಗಳವಾರ, 3 ನವೆಂಬರ್ 2020 (09:24 IST)
ದುಬೈ: ಐಪಿಎಲ್ 13 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳಿಂದ ಸೋತರೂ ಪ್ಲೇ ಆಫ್ ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. ಡೆಲ್ಲಿಯೂ ಎರಡನೇ ಸ್ಥಾನಿಯಾಗಿ ಪ್ಲೇ ಆಫ್ ಗೇರಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿತು. ದೇವದತ್ತ್ ಪಡಿಕ್ಕಲ್ 50 ರನ್ ಗಳಿಸಿದರೆ ಎಬಿಡಿ ವಿಲಿಯರ್ಸ್ ಬಿರುಸಿನ 35 ರನ್ ಗಳಿಸಿದರು. ಈ ಮೊತ್ತ ಬೆನ್ನತ್ತಿದ ಡೆಲ್ಲಿ 19 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸುವ ಮೂಲಕ ಗುರಿ ತಲುಪಿತು. ಒಂದು ವೇಳೆ ಡೆಲ್ಲಿ 18 ಓವರ್ ಗಳ ಮೊದಲೇ ಗೆಲುವು ದಾಖಲಿಸಿದ್ದರೆ ಆರ್ ಸಿಬಿ ಪ್ಲೇ ಆಫ್ ಗೆ ಏರುತ್ತಿರಲಿಲ್ಲ. ಆದರೆ ಡೆಲ್ಲಿ 19 ನೇ ಓವರ್ ನಲ್ಲಿ ಗೆಲುವು ಸಾಧಿಸಿದ್ದರಿಂದ ಮೂರನೇ ಸ್ಥಾನಕ್ಕಿಳಿದು ಪ್ಲೇ ಆಫ್ ಗೇರಿತು. ಇದೀಗ ನಾಲ್ಕನೇ ಸ್ಥಾನಕ್ಕಾಗಿ ಕೋಲ್ಕೊತ್ತಾ ಮತ್ತು ಹೈದರಾಬಾದ್ ನಡುವೆ ಪೈಪೋಟಿಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಷ್ಟಕ್ಕೂ ಪಿ ವಿ ಸಿಂಧುಗೆ ಆಗಿದ್ದಾದರೂ ಏನು? ಲಂಡನ್ ಪ್ರವಾಸದ ಹಿಂದಿದೆಯಾ ‘ರಿಟೈರ್’ ಸೀಕ್ರೆಟ್?