Publish Date: Fri, 06 Nov 2020 (09:47 IST)
Updated Date: Fri, 06 Nov 2020 (09:49 IST)
ಬರೇಲಿ : ಜುಲೈನಲ್ಲಿ 4 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಮರಕ್ಕೆ ನೇಣು ಹಾಕಿದ 26 ವರ್ಷದ ಆರೋಪಿಯನ್ನು ಸಂತ್ರಸ್ತ ಬಾಲಕನ ಮನೆಯವರು ಕೊಲೆ ಮಾಡಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಮೃತ ಬಾಲಕನ ಮನೆಗೆ ಬಂದಿದ್ದ ಆರೋಪಿ ಬಾಲಕನ ಜೊತೆ ಆಟವಾಡುತ್ತಿದ್ದಾಗ ಆತನನ್ನು ಅಪಹರಿಸಿದ್ದಾನೆ. ಬಳಿಕ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಮರಕ್ಕೆ ನೇಣು ಹಾಕಿ ಪರಾರಿಯಾಗಿದ್ದಾನೆ. ಮನೆಯವರು ಬಾಲಕನ ದೇಹ ಮರದ ಮೇಲೆ ನೇತಾಡುತ್ತಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಮೃತ ಬಾಲಕನ ಮನೆಯವರು ಆರೋಪಿಯನ್ನು ಹಿಡಿದು ಥಳಿಸಿ ಕೊಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಾಲಕನ ಸಂಬಂಧಿಕರನನ್ಉ ಬಂಧಿಇಸದ್ದು, ಉಳಿದವರಿಗಾಗಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.