Publish Date: Fri, 06 Nov 2020 (12:03 IST)
Updated Date: Fri, 06 Nov 2020 (12:05 IST)
ಲಕ್ನೋ: ನಿಧಿ ಸಿಗುತ್ತದೆಂಬ ಆಸೆಯಿಂದ ಮಾಂತ್ರಿಕನ ಸಲಹೆಗೆ ಮರುಳಾಗಿ ಪಾಪಿ ತಂದೆ ತನ್ನ ಹೆತ್ತ ಮಗಳನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
10 ವರ್ಷದ ಬಾಲಕಿಯನ್ನು ತಂದೆಯೇ ಪ್ರಾಣಹರಣ ಮಾಡಿದ್ದಾನೆ. ಮಗಳನ್ನು ಬಲಿ ಕೊಟ್ಟರೆ ಮನೆಯೊಳಗೆ ಹುದುಗಿಟ್ಟಿರುವ ಚಿನ್ನದ ನಿಧಿ ಸಿಗುತ್ತದೆಂದು ಮಾಂತ್ರಿಕನೊಬ್ಬ ನಂಬಿಸಿದ್ದ. ತಾಯಿ ಈ ವೇಳೆ ಮಗುವನ್ನು ರಕ್ಷಿಸಲು ಮುಂದಾದರೂ ಪ್ರಯೋಜನವಾಗಲಿಲ್ಲ. ಈ ಸಂಬಂಧ ಮಗುವಿನ ಅಜ್ಜಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.