ಮುಂಬೈ: ಟಿವಿ ಪತ್ರಕರ್ತ ಅರ್ನಾಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಬಂಧಿಸಿದ ಪ್ರಕರಣದ ಬಗ್ಗೆ ಬಹುಭಾಷಾ ನಟ ಅರ್ಜುನ್ ಸರ್ಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದ ಮೇಲಿನ ದಾಳಿಯನ್ನು ನಾನು ಖಂಡಿಸುತ್ತೇನೆ. ಈ ದೇಶದಲ್ಲಿ ಏನಾಗುತ್ತಿದೆ? ಇದು ಅಕ್ಷರಶಃ ಘೋರ ಕೃತ್ಯ. ತುರ್ತು ಪರಿಸ್ಥಿತಿಯ ದಿನಗಳು ನೆನಪಾಗುತ್ತಿದೆ ಎಂದು ಅರ್ಜುನ್ ಸರ್ಜಾ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ.