Publish Date: Wed, 04 Nov 2020 (11:15 IST)
Updated Date: Wed, 04 Nov 2020 (11:19 IST)
ಲಕ್ನೋ: ಆಸ್ತಿಯಲ್ಲಿ ತನಗೆ ದೊಡ್ಡ ಪಾಲು ಕೊಡಬೇಕೆಂಬ ಬೇಡಿಕೆಯನ್ನು ನಿರಾಕರಿಸಿದ ಅಮ್ಮನನ್ನು ಜೀವಂತವಾಗಿ ಪಾಪಿ ಮಗ ಮತ್ತು ಸೊಸೆ ಸುಟ್ಟು ಹಾಕಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದರಿಂದಾಗಿ ತಾಯಿ ಜೀವ ಕಳೆದುಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ತಾಯಿ ಎಲ್ಲಾ ಮಕ್ಕಳಿಗೂ ಸಮನಾಗಿ ಆಸ್ತಿ ಹಂಚುವುದಾಗಿ ಹೇಳಿದ್ದಳು. ಆದರೆ ಇದಕ್ಕೆ ಒಪ್ಪದ ಮಗ ತನಗೆ ಹೆಚ್ಚಿನ ಪಾಲು ಕೊಡಲಿಲ್ಲ ಎಂದು ಅಮ್ಮನ ಮೇಲೆ ಇಂಥಾ ಕೃತ್ಯವೆಸಗಿದ್ದಾನೆ. ಇದಕ್ಕೆ ಆತನ ಪತ್ನಿಯೂ ಸಾಥ್ ನೀಡಿದ್ದಾಳೆ.