Publish Date: Wed, 04 Nov 2020 (11:14 IST)
Updated Date: Wed, 04 Nov 2020 (11:15 IST)
ಬೆಂಗಳೂರು : ರಾಜ್ಯದಲ್ಲೂ ಲವ್ ಜಿಹಾದ್ ಕಾನೂನು ಜಾರಿಗೆ ತರಲು ನಿರ್ಧಾರ ಮಾಡಲಾಗಿದೆ. ಆ ಮೂಲಕ ರಾಜ್ಯದಲ್ಲಿ ಲವ್ ಜಿಹಾದ್ ಗೆ ಬ್ರೇಕ್ ಬೀಳಲಿದೆ ಎನ್ನಲಾಗಿದೆ.
ಲವ್ ಹೆಸರಿನಲ್ಲಿ ಮತಾಂತರದ ಹುನ್ನಾರ ಹೆಚ್ಚಾಗುತ್ತಿದೆ. ಆದಕಾರಣ ಉತ್ತರ ಪ್ರದೇಶದ ಮಾದರಿಯ ಕಾನೂನು ಜಾರಿಗೆ ತರುವಂತೆ ಒತ್ತಡ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯದಲ್ಲೂ ಲವ್ ಜಿಹಾದ್ ಕಾನೂನು ಜಾರಿಗೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಲವಂತವಾಗಿ ಮತಾಂತರವಾದ್ರೆ ಶಿಕ್ಷಾರ್ಹ ಅಪರಾಧ. 1ರಿಂದ 3 ವರ್ಷ ಜೈಲು ಶಿಕ್ಷೆ ಸಾಧ್ಯತೆ. ಹಾಗೇ ಮುಂದಿನ ವರ್ಷ ಹೊಸ ಕಾನೂನು ನಿರೀಕ್ಷೆ ಇದೆ ಎನ್ನಲಾಗಿದೆ.