Select Your Language

Notifications

webdunia
webdunia
webdunia
webdunia

ಬಂಧಿತ ಮಹಿಳೆಗೆ ಕಿರುಕುಳ: ಪೊಲೀಸರ ವಿರುದ್ಧ ಎಫ್ಐಆರ್

ಬಂಧಿತ ಮಹಿಳೆಗೆ ಕಿರುಕುಳ: ಪೊಲೀಸರ ವಿರುದ್ಧ ಎಫ್ಐಆರ್
ಬೆಂಗಳೂರು , ಗುರುವಾರ, 5 ನವೆಂಬರ್ 2020 (09:44 IST)
ಬೆಂಗಳೂರು: ವಂಚನೆ ಪ್ರಕರಣದಲ್ಲಿ ಬಂಧಿತಳಾಗಿದ್ದ ಮಹಿಳೆಗೆ ಕಿರುಕುಳ ನೀಡಿದ್ದಕ್ಕೆ ವಿಜಯನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮತ್ತು ಮೂವರು ಪೇದೆಗಳ ಮೇಲೆ ಎಫ್ಐಆರ್ ದಾಖಲಾಗಿದೆ.


ಈ ಸಂಬಂಧ ಮಹಿಳೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಇದರ ಬಗ್ಗೆ ಗಮನಹರಿಸಿರಲಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಳು. ಈ ಸಂಬಂಧ ನ್ಯಾಯಾಲಯ ಪೊಲೀಸರ ವಿರುದ್ಧ ಕ್ರಮಕ್ಕೆ ಆದೇಶಿಸಿದೆ. ಕಳೆದ ವರ್ಷ ತನ್ನ ಮೇಲೆ ಸುಳ‍್ಳು ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು. ಬಳಿಕ ಕೋರ್ಟ್ ಮುಂದೆ ತನ್ನ ಬಂಧನದ ದಿನಾಂಕವನ್ನು ತಪ್ಪಾಗಿ ಹೇಳಿದ್ದರು. ಅಲ್ಲದೆ, ತನಗೆ, ತನ್ನ ಮಗನಿಗೆ ಕಿರುಕುಳ ನೀಡಿದ್ದರು.  ಅಲ್ಲದೆ ಕೆಲವು ಖಾಲಿ ಪತ್ರಕ್ಕೆ ಸಹಿ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದರು ಎಂಬಿತ್ಯಾದಿಯಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಳು.

Share this Story:

Follow Webdunia kannada

ಮುಂದಿನ ಸುದ್ದಿ

ಪಿಂಚಣಿ ಹಣಕ್ಕಾಗಿ 90 ವರ್ಷದ ಪತ್ನಿಯನ್ನೇ ಕೊಂದ 92 ವರ್ಷದ ಅಜ್ಜ