Publish Date: Thu, 05 Nov 2020 (08:37 IST)
Updated Date: Thu, 05 Nov 2020 (08:38 IST)
ಆಂಧ್ರಪ್ರದೇಶ : ಪಿಂಚಣಿ ಹಣಕ್ಕಾಗಿ 92 ವರ್ಷದ ಅಜ್ಜ ತನ್ನ 90 ವರ್ಷದ ಪತ್ನಿಯನ್ನು ಕೋಲಿನಿಂದ ಹೊಡೆದುಕೊಂದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ ನ ಯಲವರ್ರು ಗ್ರಾಮದಲ್ಲಿ ನಡೆದಿದೆ.
ವಯಸ್ಸಾದವರಿಗೆ ಆಂಧ್ರಸರ್ಕಾರ ತಿಂಗಳಿಗೆ 2250ರೂ.ಪಿಂಚಣಿ ಹಣ ನೀಡುತ್ತಾರೆ. ಅದರಂತೆ ಇವರಿಬ್ಬರಿಗೂ ಪಿಂಚಣಿ ಹಣ ಬಂದಿದ್ದು, ಅದನ್ನು ಅಜ್ಜ ತನ್ನ ಪತ್ನಿ ಬಳಿ ಕೇಳಿದಾಗ ಆಕೆ ಅದನ್ನು ಹಂಚಿಕೊಂಡಿದ್ದಾಳೆ. ಇದರಿಂದ ಕೋಪಗೊಂಡ ಅಜ್ಜ ಪತ್ನಿಯನ್ನು ತನ್ನ ವಾಕಿಂಗ್ ಸ್ಟಿಕ್ ನಿಂದ ಹೊಡೆದಿದ್ದಾನೆ. ಇದರ ಪರಿಣಾಮ ಆಕೆ ಅಲ್ಲೇ ಮೃತಪಟ್ಟಿದ್ದಾಳೆ.
ಈ ಬಗ್ಗೆ ಅಜ್ಜನ ಪುತ್ರರು ಪೊಲೀಸರು ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಜ್ಜನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ ಎನ್ನಲಾಗಿದೆ.