ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ವಕ್ಫ್ ತಿದ್ದುಪಡಿ ಬಿಲ್ ಇಂದು ಪಾರ್ಲಿಮೆಂಟ್ ನಲ್ಲಿ ಮಂಡನೆಯಾಗಲಿದೆ. ಈ ಬಿಲ್ ಪಾಸಾಗಲು ಎಷ್ಟು ಮತಗಳು ಬೇಕು, ಕೇಂದ್ರ ಸರ್ಕಾರದ ಬಳಿ ಎಷ್ಟು ಮತಗಳಿವೆ ಇಲ್ಲಿದೆ ಸಂಪೂರ್ಣ ವಿವರ.
ಇಂದು ಮಧ್ಯಾಹ್ನ 12.30 ಕ್ಕೆ ಕಾನೂನು ಸಚಿವ ಕಿರಣ್ ರಿಜಿಜು ಸಂಸತ್ತಿನಲ್ಲಿ ವಕ್ಫ್ ಬಿಲ್ ಮಂಡನೆಯಾಗಲಿದೆ. ವಕ್ಫ್ ಮಸೂದೆ ವಿಸ್ತೃತ ಚರ್ಚೆಗಾಗಿ 8 ಗಂಟೆ ಮೀಸಲಿಡಲಾಗಿದೆ. ವಕ್ಫ್ ಬಿಲ್ ಪರ ಮತ ಚಲಾಯಿಸಲು ಎನ್ ಡಿಎ ಮತ್ತು ವಿರುದ್ಧವಾಗಿ ಮತ ಚಲಾಯಿಸಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ತೀರ್ಮಾನಿಸಿದ್ದೂ ಎರಡೂ ಪಕ್ಷಗಳು ಈಗಾಗಲೇ ತಮ್ಮ ಸಂಸದರಿಗೆ ಕಡ್ಡಾಯವಾಗಿ ಸಂಸತ್ ಗೆ ಹಾಜರಾಗಲು ವಿಪ್ ಜಾರಿ ಮಾಡಿದೆ.
ಲೋಕಸಭೆಯ ಒಟ್ಟು ಬಲಾಬಲ 543. ಅನುಮೋದನೆಗೆ 272 ಸದಸ್ಯರ ಬೆಂಬಲ ಬೇಕು. ಎನ್ ಡಿಎ ಸಂಖ್ಯಾಬಲ 298 ರಷ್ಟಿದೆ. ಇಂಡಿಯಾ ಒಕ್ಕೂಟದ ಸಂಖ್ಯಾಬಲ 233 ರಷ್ಟಿದೆ. ತಟಸ್ಥ ಸದಸ್ಯರು 11 ಮಂದಿಯಿದ್ದಾರೆ. ಹೀಗಾಗಿ ಇಂದು ಬಿಲ್ ಪಾಸಾಗುವ ನಿರೀಕ್ಷೆಯಿದೆ.
ವಕ್ಫ್ ತಿದ್ದುಪಡಿ ಬಿಲ್ ಗೆ ಜೆಡಿಯು, ಟಿಡಿಪಿ ಈಗಾಗಲೇ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದೆ. ಹೀಗಾಗಿ ಬಿಜೆಪಿಗೆ ಈಗ ಆನೆಬಲ ಬಂದಂತಾಗಿದೆ. ವಕ್ಫ್ ಬಿಲ್ ಮುಸ್ಲಿಮರ ವಿರುದ್ಧವಾಗಿ ಇಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಆದರೆ ಇತ್ತ ಇಂಡಿಯಾ ಒಕ್ಕೂಟದ ಸದಸ್ಯರು ನಾವು ಬಿಲ್ ವಿರುದ್ಧವಾಗಿ ಮತ ಹಾಕಲಿದ್ದೇವೆ ಎಂದು ಈಗಾಗಲೇ ಖಚಿತ ಪಡಿಸಿದ್ದಾರೆ.