Select Your Language

Notifications

webdunia
webdunia
webdunia
webdunia

ರಾಷ್ಟ್ರಪತಿಗಳ ಬಗ್ಗೆ ಕಾಮೆಂಟ್ ಮಾಡಿ ವಿವಾದಕ್ಕೀಡಾದ ಸೋನಿಯಾ ಗಾಂಧಿ: ವಿಡಿಯೋ

Sonia Gandhi-Rahul Gandhi

Krishnaveni K

ನವದೆಹಲಿ , ಶುಕ್ರವಾರ, 31 ಜನವರಿ 2025 (16:34 IST)
ನವದೆಹಲಿ: ಬಜೆಟ್ ಪೂರ್ವಭಾವಿಯಾಗಿ ಇಂದು ಸಂಸತ್ ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡಿದ್ದಾರೆ. ಆದರೆ ಅವರ ಭಾಷಣದ ಬಗ್ಗೆ ಕಾಮೆಂಟ್ ಮಾಡಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿವಾದಕ್ಕೀಡಾಗಿದ್ದಾರೆ.

ಇಂದು ದ್ರೌಪದಿ ಮುರ್ಮು ಸಂಸತ್ ನ್ನುದ್ದೇಶಿಸಿ ಮಾತನಾಡಿದರು. ಇದಾದ ಬಳಿಕ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕ ಗಾಂಧಿ ವಾದ್ರಾ ಜೊತೆ ರಾಜ್ಯಸಭಾ ಸದಸ್ಯೆಯಾಗಿರುವ ಸೋನಿಯಾ ಗಾಂಧಿ ಸಂಸತ್ ನ ಹೊರಾವರಣದಲ್ಲಿ ಕಾಣಿಸಿಕೊಂಡರು. ಈ ವೇಳೆ ಮಾಧ್ಯಮಗಳು ಅವರ ಪ್ರತಿಕ್ರಿಯೆ ಕೇಳಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಬಗ್ಗೆ ಕೇಳಿದಾಗ ಸೋನಿಯಾ ಗಾಂಧಿ ಅವರನ್ನು ‘ಪೂರ್ ಲೇಡಿ’ ಎಂದಿದ್ದಾರೆ. ರಾಷ್ಟ್ರಪತಿಗಳು ತಮ್ಮ ಭಾಷಣದುದ್ದಕ್ಕೂ ಸುಳ್ಳು ಭರವಸೆಗಳನ್ನೇ ಹೊರಹಾಕಿದ್ದಾರೆ ಎಂದರು. ಆದರೆ ರಾಷ್ಟ್ರಪತಿಗಳನ್ನು ಪೂರ್ ಲೇಡಿ ಎಂದಿದ್ದಕ್ಕೆ ಬಿಜೆಪಿ ಕಿಡಿ ಕಾರಿದೆ.

ರಾಷ್ಟ್ರಪತಿಗಳ ಹುದ್ದೆಗೆ ಅದರದ್ದೇ ಆದ ಘನತೆಯಿದೆ. ಆದರೆ ಅದನ್ನು ಕಡೆಗಣಿಸಿ ಸೋನಿಯಾ ಅವರನ್ನು ಪೂರ್ ಲೇಡಿ ಎಂದಿರುವುದು ರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಎಂದು ಬಿಜೆಪಿ ಕಿಡಿ ಕಾರಿದೆ. ಸೋನಿಯಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಪಕ್ಕದಲ್ಲೇ ಇದ್ದ ಪುತ್ರ ರಾಹುಲ್ ಮತ್ತು ಪುತ್ರಿ ಪ್ರಿಯಾಂಕ ಹೇಳಿಕೊಡುತ್ತಿರುವುದು ಕಂಡುಬಂದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Central Budget 2025 preview: ಬಜೆಟ್ ಬಳಿಕ ಈ ವಸ್ತುಗಳಿಗೆ ಏರಿಕೆಯಾಗುವ ಸಾಧ್ಯತೆ