ನವದೆಹಲಿ: ಲೋಕಸಭೆ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಜೊತೆಗಿದ್ದವರೆಲ್ಲಾ ಈಗ ಒಬ್ಬೊಬ್ಬಾರಿ ಓಡಿ ಹೋಗ್ತಿದ್ದಾರೆ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಮಾತನಾಡಿದ ಮೋದಿ, ವಿಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಯಾವತ್ತೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿತ್ತು. ಅವರನ್ನು ಭಾರತ ರತ್ನಕ್ಕೆ ಪರಿಗಣಿಸಲಿಲ್ಲ. ಅಂಬೇಡ್ಕರ್ ಸೋಲಿಸಲು ಏನೆಲ್ಲಾ ಮಾಡಬಹುದೋ ಮಾಡಿದರು ಎಂದಿದ್ದಾರೆ.
ಕಾಂಗ್ರೆಸ್ ಮಾಡೆಲ್ ಎಂದರೆ ಕುಟುಂಬ ಮೊದಲು ಎಂಬುದಾಗಿದೆ. ನಾವು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಧ್ಯೇಯವನ್ನು ಹೊಂದಿದ್ದೇವೆ. ಇದನ್ನು ಕಾಂಗ್ರೆಸ್ ನಿಂದ ನಿರೀಕ್ಷೆಯನ್ನೂ ಮಾಡಲಾಗದು ಎಂದು ಮೋದಿ ಟಾಂಗ್ ಕೊಟ್ಟಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಜಾತಿ ವಿಷ ಬಿತ್ತುವ ಮೂಲಕ ಧ್ವೇಷ ಸಾಧನೆಯನ್ನು ಹರಡಲು ಪ್ರಯತ್ನ ನಡೆಯುತ್ತಿದೆ. ಒಬಿಸಿ ಸಮಿತಿಗೆ ಸಾಂವಿಧಾನಿಕ ಮಾನ್ಯತೆ ಸಿಗಬೇಕೆಂದು ಒಬಿಸಿ ಪಂಗಡದ ಸಂಸದರು ಕೇಳುತ್ತಲೇ ಇದ್ದಾರೆ. ಬಹುಶಃ ಇದು ಆ ಕಾಲದ ರಾಜಕೀಯಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಆಗ ಒಂದು ಕುಟುಂಬವೇ ಎಲ್ಲಕ್ಕಿಂತ ದೊಡ್ಡದಾಗಿತ್ತು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.