ನವದೆಹಲಿ: ಮಹಾಕುಂಭಮೇಳದಲ್ಲಿ ಮಡಿದವರ ದೇಹವನ್ನು ಗಂಗಾನದಿಗೆ ಎಸೆಯಲಾಗಿದೆ ಎಂದು ರಾಜ್ಯಸಭೆ ಸಂಸದೆ ಜಯಾ ಬಚ್ಚನ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಈ ಗಂಭೀರ ಆರೋಪ ಮಾಡಿದ್ದಾರೆ. ಈಗ ದೇಶದಲ್ಲಿ ಅತ್ಯಂತ ಕಲುಷಿತ ನೀರು ಯಾವುದು ಇದೆ ಎಂದರೆ ಅದು ಗಂಗಾ ನದಿ ಎಂದು ಹೇಳಬಹುದು. ಅದೂ ಸಾಲದೆಂಬಂತೆ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ದೇಹವನ್ನು ಗಂಗಾ ನದಿಗೆ ಎಸೆಯಲಾಗಿದೆ. ಇದರಿಂದ ನೀರು ಇನ್ನಷ್ಟು ಮಲಿನವಾಗಿದೆ ಎಂದು ಜಯಾ ಬಚ್ಚನ್ ಆರೋಪಿಸಿದ್ದಾರೆ.
ಇನ್ನು, ಮಹಾ ಕುಂಭಮೇಳದಲ್ಲಿ 34 ಕೋಟಿ ಜನ ಸೇರಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಇಷ್ಟೊಂದು ಜನ ಈ ಪ್ರದೇಶದಲ್ಲಿ ಸೇರಲು ಹೇಗೆ ಸಾಧ್ಯ? ಕುಂಭಮೇಳಕ್ಕೆ ಭೇಟಿ ನೀಡುವ ಸಾಮಾನ್ಯ ಜನರಿಗೆ ಸೂಕ್ತ ಚಿಕಿತ್ಸೆ, ಆಹಾರ ಯಾವುದೂ ಸಿಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಹಾ ಕುಂಭಕ್ಕೆ ಭೇಟಿ ನೀಡುವ ಬಡಜನರಿಗೆ ಯಾವುದೇ ವ್ಯವಸ್ಥೆ ಮಾಡಲಾಗಿಲ್ಲ. ಉತ್ತರ ಪ್ರದೇಶ ಈ ಯಾವುದೇ ಸಮಸ್ಯೆಗಳ ಬಗ್ಗೆ ಸರಿಯಾದ ಉತ್ತರ ನೀಡುತ್ತಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.