Select Your Language

Notifications

webdunia
webdunia
webdunia
webdunia

Kumbhmela Stampede: ಕುಂಭಮೇಳ ಕಾಲ್ತುಳಿತದಲ್ಲಿ ಮಡಿದವರ ಮೃತದೇಹ ಇಂದು ಬೆಳಗಾವಿಗೆ

Kumbhmela

Krishnaveni K

ಬೆಳಗಾವಿ , ಗುರುವಾರ, 30 ಜನವರಿ 2025 (09:29 IST)
ಬೆಳಗಾವಿ: ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಸಾವನ್ನಪ್ಪಿದ್ದ ಬೆಳಗಾವಿಯ ನಾಲ್ವರ ಮೃತದೇಹ ಇಂದು ತವರಿಗೆ ಬರಲಿದೆ. ನಾಲ್ವರ ಸಾವಿನಿಂದ ಕುಟುಂಬಸ್ಥರಲ್ಲಿ ಶೋಕ ಮಡುಗಟ್ಟಿದೆ.

ಮಹಾಕುಂಭಮೇಳದಲ್ಲಿ ಮೌನಿ ಅಮವಾಸ್ಯೆ ದಿನ ಪುಣ್ಯಸ್ನಾನ ಮಾಡಲು ಹೋಗಿದ್ದಾಗ ನೂಕುನುಗ್ಗಲು ಉಂಟಾಗಿ ನಿನ್ನೆ ಕಾಲ್ತುಳಿತ ಸಂಭವಿಸಿತ್ತು. ಘಟನೆಯಲ್ಲಿ 30 ಭಕ್ತರು ಸಾವನ್ನಪ್ಪಿದ್ದರು ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ. ಈ ಪೈಕಿ ನಾಲ್ವರು ಕರ್ನಾಟಕದವರೂ ಸೇರಿದ್ದಾರೆ.

44 ವರ್ಷದ ಜ್ಯೋತಿ ಹತ್ತರವಾಠ, ಪುತ್ರಿ ಮೇಘಾ (24) ಮತ್ತು ಶೆಟ್ಟಿ ಗಲ್ಲಿಯ 61 ವರ್ಷದ ಅರುಣ್ ಕೋರ್ಪಡೆ, ಶಿವಾಜಿನಗರದ 48 ವರ್ಷದ ಮಹಾದೇವಿ ಬಾವನೂರ ಅವರು ಕಾಲ್ತುಳಿತದಲ್ಲಿ ಸಾವನ್ನಪ್ಪಿದವರು.

ಇವರೆಲ್ಲರ ಮೃತದೇಹಗಳನ್ನು ಆಂಬ್ಯುಲೆನ್ಸ್ ಮೂಲಕ ದೆಹಲಿಗೆ ಕರೆತಂದು ಮಧ್ಯಾಹ್ನ 3.30 ರ ವಿಮಾನದಲ್ಲಿ ಬೆಳಗಾವಿಗೆ ಕರೆತರಲಾಗುತ್ತಿದೆ. ಸಂಜೆ 5.30 ರ ಸುಮಾರಿಗೆ ಬೆಳಗಾವಿಗೆ ಮೃತದೇಹಗಳು ಬರುವ ನಿರೀಕ್ಷೆಯಿದೆ. ಇವರ ಮೃತದೇಹಗಳನ್ನು ಕರೆತರಲು ಬೆಳಗಾವಿ ಡಿಸಿ ಮೊಹಮ್ಮದ್ ಇಬ್ಬರು ವಿಶೇಷ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ದಿನಕ್ಕೆ ಸೇವಿಂಗ್ಸ್ ಖಾತೆಗೆ ಎಷ್ಟು ಹಣ ಜಮೆ ಮಾಡಬೇಕು ಇಲ್ಲಿದೆ ವಿವರ