Select Your Language

Notifications

webdunia
webdunia
webdunia
webdunia

ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತಕ್ಕೆ ಇದೇ ಕಾರಣ ಎಂದ ಸಿಎಂ ಯೋಗಿ ಆದಿತ್ಯನಾಥ್

Mahakumbh Mela 2025, Reason For MahakumbhMela Stampede, CM Yogi Adityanath

Sampriya

ಪ್ರಯಾಗ್‌ರಾಜ್‌ , ಬುಧವಾರ, 29 ಜನವರಿ 2025 (16:56 IST)
Photo Courtesy X
ಪ್ರಯಾಗ್‌ರಾಜ್‌: ಮಹಾಕುಂಭಮೇಳದಲ್ಲಿ ನಡೆದ ಕಾಲ್ತುಳಿತಕ್ಕೆ ಕೆಲವು ಭಕ್ತರು ಬ್ಯಾರಿಕೇಡ್‌ಗಳಿಂದ ಮೇಲಕ್ಕೆ ಹಾರಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಸದ್ಯದ ಪ್ರಯಾಗ್‌ರಾಜ್ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಭರವಸೆ ನೀಡಿದ ಅವರು, ಮಹಾಕುಂಭದ ಬಗ್ಗೆ ಜನರು ವದಂತಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿದರು.

"ಕುಂಭದಲ್ಲಿ ಭಾರೀ ಜನಸಮೂಹವಿದೆ. ಎಂಟರಿಂದ ಹತ್ತು ಕೋಟಿ ಭಕ್ತರು ಕುಂಭ ಮೇಳದಲ್ಲಿದ್ದಾರೆ. ಸುಮಾರು ಆರು ಕೋಟಿ ಭಕ್ತರು ನಿನ್ನೆ ಬಂದು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು. ಘಟನೆಯು ಮಧ್ಯರಾತ್ರಿ 1 ರಿಂದ 2 ಗಂಟೆಯ ನಡುವೆ ಸಂಭವಿಸಿದೆ. ದರ್ಶಕರು ಮುಂದೆ ಸಾಗುತ್ತಾರೆ. ಜನಸಂದಣಿ ಕಡಿಮೆಯಾದ ನಂತರ ಅಮೃತ್ ಸ್ನಾನ್ ಎಂದು ಅವರು ಹೇಳಿದರು.

ಘಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಲ್ಕು ಬಾರಿ ಸಂಪರ್ಕಿಸಿದ್ದಾರೆ ಮತ್ತು ಅವರು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಕೂಡ ಆದಿತ್ಯನಾಥ್ ಅವರೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಮುನಾ ನದಿ ನೀರನ್ನು ಪ್ರಧಾನಿಯಾದ ನಾನೂ ಸೇವಿಸುತ್ತೇನೆ: ಕೇಜ್ರಿವಾಲ್ ಆರೋಪಕ್ಕೆ ಮೋದಿ ಕೆಂಡಾಮಂಡಲ