ಹೈದರಾಬಾದ್: ಮಹಾಕುಂಭ ಮೇಳದಲ್ಲಿ ತನ್ನ ಕಣ್ಣೋಟ ಮತ್ತು ಬ್ಯುಟಿಯಿಂದ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ ರುದ್ರಾಕ್ಷಿ ಮಾರಾಟ ಮಾಡುತ್ತಿದ್ದ ಮೊನಲಿಸಾಗೆ ಇದೀಗ ಬಾಲಿವುಡ್‌ನಿಂದ ಆಫರ್ ಬರುತ್ತಿದೆ.
ಮೊನಲಿಸಾ ಬ್ಯೂಟಿ ನೋಡಿದ ಬಾಲಿವುಡ್ ನಿರ್ಮಾಪಕ ಸನೋಜ್ ಮಿಶ್ರಾ ಎನ್ನುವವರು ಇದೀಗ ಹೊಸ ಚಿತ್ರಕ್ಕೆ ಅವರನ್ನು ನಟಿಸಲು ಆಫರ್ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವರದಿಗಳ ಪ್ರಕಾರ, 'ದಿ ಡೈರಿ ಆಫ್ ವೆಸ್ಟ್ ಬೆಂಗಾಲ್' ಮತ್ತು 'ರಾಮ್ ಕಿ ಜನ್ಮಭೂಮಿ' ಚಿತ್ರಗಳಿಗೆ ಹೆಸರುವಾಸಿಯಾದ ನಿರ್ದೇಶಕರು ತಮ್ಮ ಮುಂದಿನ ಚಿತ್ರಕ್ಕೆ ಮೊನಾಲಿಸಾ ಅವರನ್ನು ಪ್ರಮುಖ ಪಾತ್ರದಲ್ಲಿ ಆಯ್ಕೆ ಮಾಡಬಹುದು.
ಮಹಾಕುಂಭಮೇಳದಲ್ಲಿ ಇಂದೋರ್‌ನ ಮಾಲೆ ಮಾರಾಟಗಾರ್ತಿ ಮೊನಲಿಸಾ ತನ್ನ ನೈಜ ಸೌಂದರ್ಯದಿಂದ ಸಾಮಾಜಿಕ ಜಾಲತಾಣದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದಳು. ಒಂದು ದಿನದಲ್ಲಿ ಈಕೆಗೆ ಸಿಕ್ಕಾ ಜನಪ್ರಿಯತೆ ಇದೀಗ ಆಕೆ ತನ್ನ ವ್ಯಾಪಾರವನ್ನು ಮಾಡದಂತೆ ಮಾಡಿದೆ. ಮಹಾಕುಂಭಮೇಳದಲ್ಲಿ ಮೊನಾಲಿಸಾ ಜತೆ ಸೆಲ್ಫಿಗಾಗಿ ಜನ ಮುತ್ತಿಗೆ ಬೀಳುತ್ತಿದ್ದು, ಇದರಿಂದ ಆಕೆಯನ್ನು ತನ್ನ ಊರಿಗೆ ಕರೆದುಕೊಂಡು ಹೋಗಿದ್ದಾರೆ.