Select Your Language

Notifications

webdunia
webdunia
webdunia
webdunia

ಯಮುನಾ ನದಿ ನೀರನ್ನು ಪ್ರಧಾನಿಯಾದ ನಾನೂ ಸೇವಿಸುತ್ತೇನೆ: ಕೇಜ್ರಿವಾಲ್ ಆರೋಪಕ್ಕೆ ಮೋದಿ ಕೆಂಡಾಮಂಡಲ

PM Modi

Krishnaveni K

ನವದೆಹಲಿ , ಬುಧವಾರ, 29 ಜನವರಿ 2025 (16:19 IST)
ನವದೆಹಲಿ: ಯಮುನಾ ನದಿ ನೀರಿಗೆ ಹರ್ಯಾಣದಲ್ಲಿ ಬಿಜೆಪಿಯವರು ವಿಷ ಮಿಕ್ಸ್ ಮಾಡಿ ದೆಹಲಿಗೆ ಹರಿಯಬಿಡುತ್ತಿದ್ದಾರೆ ಎಂಬ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರಧಾನಿ ಮೋದಿ ಕೆಂಡಾಮಂಡಲರಾಗಿದ್ದಾರೆ.

ದೆಹಲಿಯಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡಿದ ಅವರು ಕೇಜ್ರಿವಾಲ್ ಆರೋಪದ ಬಗ್ಗೆ ಕಿಡಿ ಕಾರಿದ್ದಾರೆ. ಯಮುನಾ ನದಿಗೆ ಹರ್ಯಾಣ ಜನ ವಿಷ ಬೆರೆಸುವುದೇ? ಹರ್ಯಾಣದವರ ಸಂಬಂಧಿಕರು ದೆಹಲಿಯಲ್ಲೂ ಇಲ್ಲವೇ? ತಮ್ಮ ಸಂಬಂಧಿಕರಿಗೇ ಹರ್ಯಾಣದವರು ವಿಷದ ನೀರು ಕಳುಹಿಸುತ್ತಾರೆಯೇ? ಆರೋಪ ಹೊರಿಸುವುದಕ್ಕೂ ಮಿತಿ ಬೇಡವೇ? ಯಮುನಾ ನದಿ ನೀರನ್ನೇ ಪ್ರಧಾನ ಮಂತ್ರಿಯಾದ ನಾನು ಸೇರಿ ದೆಹಲಿಯ ಜನರೆಲ್ಲರೂ ಸೇವನೆ ಮಾಡುತ್ತಿದ್ದೇವೆ’ ಎಂದು ಮೋದಿ ಖಡಕ್ ಆಗಿ ಹೇಳಿದ್ದಾರೆ.

‘ಇದು ದೆಹಲಿ ಮಾಜಿ ಸಿಎಂ ಮತ್ತು ಅವರ ಪಕ್ಷ ಹರ್ಯಾಣ ಜನತೆಗೆ ಮಾಡಿದ ಅವಮಾನ. ಕೇವಲ ಹರ್ಯಾಣ ಮಾತ್ರವಲ್ಲ ಭಾರತೀಯರಿಗೇ ಮಾಡಿದ ಅವಮಾನ. ನಮ್ಮ  ದೇಶದಲ್ಲಿ ಕುಡಿಯಲು ನೀರು ನೀಡುವುದು ಅತ್ಯಂತ ಪುಣ್ಯದ ಕೆಲಸ ಎಂಬ ನಂಬಿಕೆಯಿದೆ. ಇದೀಗ ಸೋಲುವ ಭಯದಲ್ಲಿ ಏನು ಬೇಕಾದರೂ ಆರೋಪ ಮಾಡಬಹುದೇ? ಇಂತಹ ಜನರಿಗೆ ದೆಹಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಯಮುನಾ ನದಿ ನೀರಿಗೆ ಬಿಜೆಪಿಯವರು ವಿಷ ಬೆರೆಸಿ ದೆಹಲಿಗೆ ಕಳುಹಿಸುತ್ತಾರೆ ಎಂಬ ವಿಚಾರವಾಗಿ ಆಪ್ ಪಕ್ಷ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು. ಇದಕ್ಕೆ ಉತ್ತರಿಸಿದ್ದ ಚುನಾವಣಾ ಆಯೋಗ ಆರೋಪಕ್ಕೆ ತಕ್ಕ ಪುರಾವೆ ನೀಡಬೇಕು ಎಂದು ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಕುಂಭಮೇಳ ಕಾಲ್ತುಳಿತ ಪ್ರಕರಣ: ಬೆಳಗಾವಿಯ ಇಬ್ಬರು ದುರ್ಮರಣ