ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ವಕ್ಫ್ ತಿದ್ದುಪಡಿ ಬಿಲ್ ಕೊನೆಗೂ ಲೋಕಸಭೆಯಲ್ಲಿ ಇಂದು ಮಂಡನೆಯಾಗಿದೆ. ಈ ನಡುವೆ ವಿಪಕ್ಷಗಳು ಗದ್ದಲವೆಬ್ಬಿಸಿವೆ.
ಇಂದು ಲೋಕಸಭೆಯಲ್ಲಿ ಕಾನೂನು ಸಚಿವ ಕಿರಣ್ ರಿಜಿಜು ವಕ್ಫ್ ತಿದ್ದುಪಡಿ ಬಿಲ್ 2025 ರನ್ನು ಮಂಡಿಸಿದರು. ಈ ವೇಳೆ ವಿಪಕ್ಷಗಳು ಜೋರಾಗಿ ಗದ್ದಲವೆಬ್ಬಿಸಿ ತಮ್ಮ ವಿರೋಧ ವ್ಯಕ್ತಪಡಿಸಿವೆ. ಇದೀಗ ಬಿಲ್ ಬಗ್ಗೆ ಚರ್ಚೆ ನಡೆಯಲಿದ್ದು, ಅದಾದ ಬಳಿಕ ಮತ ಪ್ರಕ್ರಿಯೆ ನಡೆಯಲಿದೆ.
ಹೊಸ ಮಸೂದೆಯಲ್ಲಿ ಏನಿದೆ?
ಕಳೆದ ಐದು ವರ್ಷಗಳಿಂದ ಇಸ್ಲಾಂ ಧರ್ಮ ಅನುಸರಿಸುತ್ತಿರುವವರು ಮಾತ್ರ ವಕ್ಫ್ ಮಂಡಳಿಗೆ ಆಸ್ತಿ ದಾನ ಮಾಡಬಹುದಾಗಿದೆ. ದಾನ ಮಾಡುವ ಆಸ್ತಿಗೆ ಸಂಬಂಧಿಸಿದಂತೆ ತಕರಾರುಗಳು ಇದ್ದಲ್ಲಿ ತನಿಖೆಯ ನಂತರವಷ್ಟೇ ಇತ್ಯರ್ಥವಾಗಲಿದೆ. ಇಷ್ಟು ದಿನ ಇದನ್ನು ವಕ್ಫ್ ಮಂಡಳಿಯೇ ನೋಡಿಕೊಳ್ಳುತ್ತಿತ್ತು. ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಇಬ್ಬರು ಸದಸ್ಯರಿರಲಿದ್ದಾರೆ.