ಕೋಲ್ಕತ್ತಾ: ಇದು ಬಾಂಗ್ಲಾದೇಶವಲ್ಲ, ನಮ್ಮ ದೇಶದ ಪಶ್ಚಿಮ ಬಂಗಾಲದಲ್ಲೇ ನಡೆದ ಘಟನೆ. ವಕ್ಫ್ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಶಿವತಿಲಕವಿರುವ ವಾಹನವೊಂದನ್ನು ಪ್ರತಿಭಟನಾಕಾರರು ಜಖಂಗೊಳಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪಶ್ಚಿಮ ಬಂಗಾಲದಲ್ಲಿ ವಕ್ಫ್ ತಿದ್ದುಪಡಿ ಬಿಲ್ ವಿರೋಧಿಸಿ ಪ್ರತಿಭಟನೆ ಜೋರಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿ ಪ್ರತಿಭಟನಾಕಾರರು ಹಿಂಸಾಚಾರ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೂರಾರು ಮಂದಿಯನ್ನು ಬಂಧಿಸಲಾಗಿದೆ.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಪ್ರತಿಭಟನಾಕಾರರ ಗುಂಪೊಂದು ಪಶ್ಚಿಮ ಬಂಗಾಲದ ಹೆದ್ದಾರಿಯಲ್ಲಿ ಶಿವನ ತಿಲಕವಿರುವ ಚಿಹ್ನೆಯಿರುವ ಕಾರನ್ನು ತಡೆದು ನಿಲ್ಲಿಸಿ ಮನಸ್ಸಿಗೆ ಬಂದಂತೆ ಜಖಂಗೊಳಿಸುತ್ತಾರೆ.
ವಿಪರ್ಯಾಸವೆಂದರೆ ಅಲ್ಲೇ ಪಕ್ಕದಲ್ಲೇ ಓರ್ವ ಪೊಲೀಸ್ ಸಿಬ್ಬಂದಿಯಿದ್ದರೂ ಏನೂ ಮಾಡದೇ ಸುಮ್ಮನೇ ನಿಂತಿರುತ್ತಾರೆ. ಹಲವರು ಈ ಘಟನೆಗೆ ಸಾಕ್ಷಿಯಾಗಿರುತ್ತಾರೆ. ಆದರೆ ಯಾರೂ ತಡೆಯುವ ಪ್ರಯತ್ನವನ್ನೇ ಮಾಡುವುದಿಲ್ಲ.