ನವದೆಹಲಿ: ರೈಲು ಎಸಿ ಕೋಚ್ ನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸಿದ್ದೂ ಅಲ್ಲದೆ, ತನ್ನನ್ನು ಪ್ರಶ್ನಿಸಲು ಬಂದ ಅಧಿಕಾರಿಗಳಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಮಹಿಳೆಯೊಬ್ಬರ ವಿಡಿಯೋವೊಂದು ವೈರಲ್ ಆಗಿದೆ.
ರೈಲಿನ ಎಸಿ ಕೋಚ್ ನಲ್ಲಿ ಬುರ್ಖಾ ಧರಿಸಿ ಮಹಿಳೆಯೊಬ್ಬಳು ಕೂತಿದ್ದಾಳೆ. ಆಕೆಯ ಬಳಿ ಟಿಕೆಟ್ ಇರುವುದಿಲ್ಲ. ಟಿಸಿ ಕೇಳಿದ್ದಕ್ಕೆ ಕೊಡುವುದೂ ಇಲ್ಲ. ಹೀಗಾಗಿ ರೈಲ್ವೇ ಅಧಿಕಾರಿಗಳು ಅಲ್ಲಿಗೆ ಬರುತ್ತಾರೆ. ಈ ವೇಳೆ ಆಕೆ ಅಕ್ಷರಶಃ ಧಮ್ಕಿ ಹಾಕುತ್ತಾಳೆ.
ಪದೇ ಪದೇ ತನ್ನನ್ನು ಟಿಕೆಟ್ ಬಗ್ಗೆ ಕೇಳಿದಾಗ ಎಲ್ಲರನ್ನೂ ಕತ್ತರಿಸಿ ಹಾಕುತ್ತೇನೆ ಎಂದಿದ್ದಾಳೆ. ಅಲ್ಲದೆ ಪ್ರಶ್ನಿಸಲು ಬಂದ ಸಿಬ್ಬಂದಿಗೇ ಹೊಡೆಯಲು ಹೋಗಿದ್ದಾಳೆ. ಇದೂ ಸಾಲದೆಂಬಂತೆ ನಾನು ಯಾರು ಎಂದು ಪ್ರಧಾನಮಂತ್ರಿಗೆ ಹೋಗಿ ಕೇಳಿ ಎಂದಿದ್ದಾಳೆ.
ಇಷ್ಟಾದರೂ ಆಕೆ ಟಿಕೆಟ್ ತೋರಿಸಿಲ್ಲ. ಈಕೆಯ ವಿಡಿಯೋ ನೋಡಿ ಎಷ್ಟು ಧಿಮಾಕು ಇರಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಕಾಮೆಂಟ್ ಮಾಡಿದ್ದಾರೆ. ಇವರಿಗೆಲ್ಲಾ ಕಾನೂನು ಅನ್ವಯವಾಗುವಿದಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.