Select Your Language

Notifications

webdunia
webdunia
webdunia
webdunia

ವಿಚ್ಚೇದನಗೊಂಡ ಮುಸ್ಲಿಂ ಮಹಿಳೆಯೂ ಪತಿಯಿಂದ ಜೀವನಾಂಶಕ್ಕೆ ಅರ್ಹಳು: ಸುಪ್ರೀಂ ಕೋರ್ಟ್

Supreme Court

Sampriya

ನವದೆಹಲಿ , ಬುಧವಾರ, 10 ಜುಲೈ 2024 (14:06 IST)
Photo Courtesy X
ನವದೆಹಲಿ: ವಿಚ್ಚೇದಿತ ಮುಸ್ಲಿಂ ಮಹಿಳೆ ಕೂಡ ತನ್ನ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳು. ಇದು ಧರ್ಮದ ಹಂಗಿಲ್ಲದೆ ಎಲ್ಲಾ ಮಹಿಳೆಯರಿಗೂ ಅನ್ವಯಿಸುತ್ತದೆ  ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.

ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 125ರಡಿ  ಎಲ್ಲಾ ಮಹಿಳೆಯರಿಗೆ ಜೀವನಾಂಶದ ಹಕ್ಕುಇದ್ದು, ಮುಸ್ಲಿಂ ಮಹಿಳೆಯರೂ ಇದರಲ್ಲಿ ಸೇರುತ್ತಾರೆ ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಅಗಸ್ಟಿನ್ ಜಾರ್ಜ್ ಮೈಶ್ ಅವರಿದ್ದ ಪೀಠವು ಈ ಬಗ್ಗೆ ಬೇರೆ ಬೇರೆ ತೀರ್ಪು ‍ ಪ್ರಕಟಿಸಿದರೂ, ಒಮ್ಮತದ ತೀರ್ಪು ನೀಡಿತು.

ಜೀವನಾಂಶ ಪಡೆಯುವುದು ವಿವಾಹವಾದ ಎಲ್ಲಾ ಮಹಿಳೆಯರ ಹಕ್ಕು. ಅದು ದಾನವಲ್ಲ. ಇದು ಧರ್ಮದ ಹಂಗಿಲ್ಲದೆ ಎಲ್ಲಾ ಮಹಿಳೆಯರಿಗೂ ಅನ್ವಯ ಎಂದು ಪೀಠ ಹೇಳಿತು.

ಸೆಕ್ಷನ್ 125 ಕೇವಲ ವಿವಾಹವಾದ ಮಹಿಳೆಯರಿಗೆ ಮಾತ್ರವಲ್ಲ, ಎಲ್ಲಾ ಮಹಿಳೆಯರಿಗೂ ಅನ್ವಯವಾಗುತ್ತದೆ ಎಂದು ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ನಾಗರತ್ನ ಹೇಳಿದರು.

ಆ ಮೂಲಕ ಪತ್ನಿಗೆ ಜೀವನಾಂಶ ನೀಡಬೇಕು ಎಂದು ಕೌಟುಂಬಿಕ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಲು ನಿರಾಕರಿಸಿದ ತೆಲಂಗಾಣ ಹೈಕೋರ್ಟ್‌ನ ನಿರ್ಧಾರ ಪ್ರಶ್ನಿಸಿ ಮೊಹಮದ್ ಅಬ್ದುಲ್ ಸಮದ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ವಿಚ್ಚೇದನಗೊಂಡ ಮುಸ್ಲಿಂ ಮಹಿಳೆ ಈ ಸೆಕ್ಷನ್‌ನಡಿ ಜೀವನಾಂಶ ಪಡೆಯಲು ಅರ್ಹರಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಡಾ ಹಗರಣ: 2 ನಿವೇಶನಕ್ಕೆ ಅರ್ಹತೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ನೀಡಿದ್ದು 14 ಸೈಟು