Select Your Language

Notifications

webdunia
webdunia
webdunia
webdunia

27 ವಾರಗಳ ಭ್ರೂಣ ತೆಗೆಯಲು ನಿರಾಕರಿಸಿದ ಸುಪ್ರೀಂಕೋರ್ಟ್

Pregnant

Sampriya

ನವದೆಹಲಿ , ಬುಧವಾರ, 15 ಮೇ 2024 (20:07 IST)
Photo Courtesy X
ನವದೆಹಲಿ: 27 ವಾರಗಳ ಗರ್ಭಿಣಿಯೊಬ್ಬರು ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.  ಬುಧವಾರ ತಳ್ಳಿಹಾಕಿದೆ. ಗರ್ಭದಲ್ಲಿರುವ ಭ್ರೂಣಕ್ಕೂ ಬದುಕುವ ಮೂಲಭೂತ ಹಕ್ಕು ಇದೆ ಎಂದು ಕೋರ್ಟ್‌ ಈ ವೇಳೆ ಅಭಿಪ್ರಾಯಪಟ್ಟಿದೆ.

'ಗರ್ಭ ಏಳು ವಾರವನ್ನೂ ಮೀರಿದೆ. ಭ್ರೂಣಕ್ಕೂ ಬದುಕುವ ಹಕ್ಕಿದೆ' ಎಂದು ಕೋರ್ಟ್ ಹೇಳಿದೆ.

ಗರ್ಭಪಾತ ಮಾಡಿಸಿಕೊಳ್ಳಲು  20 ವರ್ಷದ ಗರ್ಭಿಣಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಹೈಕೋರ್ಟ್‌ ಮೇ 3ರಂದು ತಿರಸ್ಕರಿಸಿದ್ದರಿಂದ ಇದನ್ನು ಪ್ರಶ್ನಿಸಿ ಯುವತಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.


ಇಂದು ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್‌. ಗವಾಯಿ ನೇತೃತ್ವದ ನ್ಯಾಯಪೀಠವು ಗರ್ಭಪಾತಕ್ಕೆ ಅನುಮತಿ ನಿರಾಕರಿಸಿತು. ಜೊತೆಗೆ, ಕಾನೂನಿಗೆ ವಿರುದ್ಧವಾಗಿ ಆದೇಶ ನೀಡಲು ಸಾಧ್ಯವಿಲ್ಲ ಎಂದಿತು.

ಅದಲ್ಲದೆ ಗರ್ಭ ಏಳೂ ವಾರ ದಾಟಿದ್ದರಿಂದ ಭ್ರೂಣಕ್ಕೆ ಬದುಕುವ ಹಕ್ಕಿದೆ ಎಂದು ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೇ ಟಿಕೆಟ್ ಕ್ಯಾನ್ಸಲ್ ಮಾಡಿ ವಿದೇಶದಲ್ಲಿ ಕಣ್ಣಾಮುಚ್ಚಾಲೆಯಾಡುತ್ತಿರುವ ಪ್ರಜ್ವಲ್