ಬೆಂಗಳೂರು: ಜಯಪ್ರಕಾಶ್ ಹೆಗ್ಡೆ ಆಯೋಗದ ಜಾತಿಗಣತಿ ವರದಿ ವಿಚಾರಗಳು ಬಹಿರಂಗವಾಗಿದ್ದು ಈ ವರದಿಯಲ್ಲಿ ಒಬಿಸಿಗೆ ಶೇ.51 ರಷ್ಟು ಮೀಸಲಾತಿ ನೀಡಬೇಕು ಎಂಬ ಸಲಹೆಯಿದೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಈಗ ತೀವ್ರ ವಿರೋಧ ವ್ಯಕ್ತವಾಗಿದೆ.
ಒಬಿಸಿ ವರ್ಗಕ್ಕೆ ಈಗ ಶೇ.32 ರಷ್ಟು ಮೀಸಲಾತಿಯಿದೆ. ಇನ್ನೀಗ ಶೇ.51 ಕ್ಕೆ ಹೆಚ್ಚಳ ಮಾಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಅದೇ ರೀತಿ ಹಾಲಿ ಇರುವ ಪ್ರವರ್ಗ 1 ರ ಬದಲಿಗೆ ಪ್ರವರ್ಗ ಎ ರಚನೆ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಎಸ್ ಸಿಗೆ ಶೇ.17.15, ಎಸ್ ಟಿ ವರ್ಗದವರಿಗೆ ಶೇ.6.95 ರಷ್ಟು ಮೀಸಲಾತಿ ನೀಡುವಂತೆ ಶಿಫಾರಸ್ಸು ಮಾಡಲಾಗಿದೆ. ಸದ್ಯಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿಯಿದೆ.
ಆದರೆ ಈ ಜಾತಿಗಣತಿ ಶಿಫಾರಸ್ಸಿಗೆ ಒಕ್ಕಲಿಗರಿಂದ ವಿರೋಧ ವ್ಯಕ್ತವಾಗಿದೆ. ಜಾತಿಗಣತಿ ವರದಿ ಜಾರಿಯಾಗುವುದನ್ನು ನಾವು ಒಪ್ಪುವುದಿಲ್ಲ. ಒಂದು ವೇಳೆ ಜಾತಿಗಣತಿ ವರದಿ ಜಾರಿಯಾಗಬೇಕಾದರೆ ಸರಿಯಾಗಿ ಸಮೀಕ್ಷೆ ಮಾಡಿ ಅನುಷ್ಠಾನಕ್ಕೆ ಬರಲಿ ಎಂದು ಆಗ್ರಹಿಸಿದ್ದಾರೆ.