Select Your Language

Notifications

webdunia
webdunia
webdunia
webdunia

Santosh Lad: ರಾಜ್ಯದಲ್ಲಿ 75 ಶೇಕಡಾ ಮೀಸಲಾತಿ ಕೊಡಬೇಕು: ಸಂತೋಷ್ ಲಾಡ್

Santhosh Lad

Krishnaveni K

ಬೆಂಗಳೂರು , ಬುಧವಾರ, 19 ಮಾರ್ಚ್ 2025 (12:39 IST)
ಬೆಂಗಳೂರು: ರಾಜ್ಯದಲ್ಲಿ ಶೇಕಡಾ 75 ರಷ್ಟು ಮೀಸಲಾತಿ ಕೊಡಬೇಕು. ಹೀಗಂತ ನಾನು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಸಂತೋಷ್ ಲಾಡ್ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಸಚಿವ ಸಂತೋಷ್ ಲಾಡ್ ಎಲ್ಲಾ ಶೋಷಿತ ವರ್ಗಗಳ ಅಭಿವೃದ್ಧಿಯಾಗಬೇಕು ಎಂದರೆ ಕನಿಷ್ಠ 75 ರಷ್ಟಾದರೂ ಮೀಸಲಾತಿ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

‘ಶೋಷಿತ ವರ್ಗಗಳು, ಅಹಿಂದ ವರ್ಗಗಳು ಎಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕು. ತಮಿಳುನಾಡಿನಲ್ಲಿ ಶೇ.69 ರಷ್ಟು ಶೇಕಡಾ ಇದೆ. ಶೋಷಿತ ವರ್ಗಗಳು ಅಭಿವೃದ್ಧಿಯಾಗಬೇಕೆಂದರೆ ದೇಶದಲ್ಲಿ ವಿಶೇಷಿತವಾಗಿ 75 ಶೇಕಡಾ ಮೀಸಲಾತಿ ಘೋಷಿಸಬೇಕು ಎಂದು ನಾನು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದ್ದೀನಿ’ ಎಂದಿದ್ದಾರೆ.

ಎಲ್ಲರೂ ಅಭಿವೃದ್ಧಿಯಾಗಬೇಕು. ತಮಿಳುನಾಡು 9 ನೇ ತಿದ್ದುಪಡಿ ಮಾಡಿಕೊಂಡು ಮೀಸಲಾತಿ ಹೆಚ್ಚಿಸಿದೆ. ನಮ್ಮಲ್ಲೂ ಅವಕಾಶ ಹೆಚ್ಚಾಗುತ್ತದೆ ಎಂಬ ಕಾರಣಕ್ಕೆ ಮೀಸಲಾತಿ ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Dog viral video:ಮಗುವಿನ ಜೊತೆ ಮಗುವಿನಂತೆ ಆಡುತ್ತಿರುವ ಈ ಕ್ಯೂಟ್ ನಾಯಿ ವಿಡಿಯೋ ನೋಡಿ