ಬೆಂಗಳೂರು: ನಮ್ಮ ಮೆಟ್ರೋ ಇತ್ತೀಚೆಗೆ ಬೇಡದ ಕಾರಣಗಳಿಗೇ ಸುದ್ದಿಯಾಗುತ್ತಿದೆ. ಇದೀಗ ಯುವಕನೊಬ್ಬ ಯುವತಿಯ ಖಾಸಗಿ ಅಂಗಾಂಗಕ್ಕೆ ಕೈ ಹಾಕಿರುವ ಅಸಭ್ಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರ್ನಾಟಕ ಪೋರ್ಟ್ ಫೊಲಿಯೋ ಎಂಬ ಎಕ್ಸ್ ಪೇಜ್ ನಲ್ಲಿ ಈ ವಿಡಿಯೋ ಪ್ರಕಟವಾಗಿದೆ. ನಮ್ಮ ಮೆಟ್ರೋ ಮಾದಾವರ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಹಲವರ ನಡುವೆ ಒಂದು ಯುವಕ ಮತ್ತು ಯುವತಿಯೂ ನಿಂತಿದ್ದಾರೆ.
ಎಲ್ಲರ ಎದುರೇ ಈ ಯುವಕ-ಯುವತಿ ಅಸಭ್ಯವಾಗಿ ವರ್ತಿಸಿದ್ದಾರೆ. ಪಬ್ಲಿಕ್ ಆಗಿಯೇ ಯುವಕ ಯುವತಿಯ ಶರ್ಟ್ ಒಳಗೆ ಕೈ ಹಾಕಿ ಅಸಭ್ಯ ವರ್ತನೆ ತೋರಿದ್ದಾನೆ. ನಿಲ್ದಾಣದಲ್ಲಿ ಸಾಕಷ್ಟು ಜನರ ಮುಂದೆಯೇ ಈ ರೀತಿ ವರ್ತನೆ ತೋರಿದ ಈ ಜೋಡಿಯ ವಿಡಿಯೋ ನೋಡಿ ಜನ ಈಗ ಛೀಮಾರಿ ಹಾಕುತ್ತಿದ್ದಾರೆ.
ಬೆಂಗಳೂರು ಯಾವತ್ತೂ ಸಭ್ಯತೆಗೆ ಹೆಸರು ವಾಸಿ. ಆದರೆ ಇತ್ತೀಚೆಗೆ ಯಾಕೋ ಇದು ದೆಹಲಿಯ ರೀತಿ ಪರಿವರ್ತನೆಯಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೇಗೆ ನಡೆದುಕೊಳ್ಳಬೇಕು ಎಂದೂ ಗೊತ್ತಿಲ್ಲದ ಇಂತಹ ಅನಾಗರಿಕರೇ ಹೆಚ್ಚಾಗುತ್ತಿದ್ದಾರೆ ಎಂದು ಜನ ಟೀಕಾ ಪ್ರಹಾರ ನಡೆಸಿದ್ದಾರೆ.